ಮಂಗಳವಾರ, ಆಗಸ್ಟ್ 4, 2020
22 °C
ರೊಮ್ಯಾಂಟಿಕ್‌‌ ದೃಶ್ಯಗಳು ವೈರಲ್‌

‘ದಿ ಸೂಟಬಲ್ ಬಾಯ್‌‘ ಟ್ರೇಲರ್ ಬಿಡುಗಡೆ: ರೊಮ್ಯಾಂಟಿಕ್‌‌ ದೃಶ್ಯಗಳು ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಿಬಿಸಿ ಒನ್‌‘ಗಾಗಿ ವಾಹಿನಿಗಾಗಿ ತಯಾರಿಸಿರುವ ಮಿನಿ ವೆಬ್‌ ಸರಣಿ ‘ದಿ ಸೂಟಬಲ್ ಬಾಯ್‌‘. ಮೀರಾ ನಾಯರ್‌ ನಿರ್ದೇಶನದ ಸರಣಿಯಲ್ಲಿ ಬಾಲಿವುಡ್ ‌ನಟಿ ಟಬು ಮತ್ತು ಇಶಾನ್‌ ಕಟ್ಟರ್ ಅಭಿನಯಿಸಿದ್ದಾರೆ.

ಆರಂಭವಾಗುವ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಈ ಸರಣಿಯ ಟ್ರೇಲರ್ ಈಗ‌ ಬಿಡುಗಡೆಯಾಗಿದೆ. ಇದೇ 26ರಿಂದ ಒಟ್ಟು ಆರು ಕಂತುಗಳಲ್ಲಿ ಸರಣಿ‌ ಪ್ರಸಾರವಾಗಲಿದೆ.

‌ಈಗ ಬಿಡುಗಡೆಯಾಗಿರುವ ಒಂದು ನಿಮಿಷದ ಟ್ರೇಲರ್‌ನಲ್ಲಿ ಇಶಾನ್‌ ಮತ್ತು ಟಬು ಜೋಡಿಯ ಸಖತ್‌ ರೊಮ್ಯಾಂಟಿಕ್‌ ದೃಶ್ಯಗಳಿವೆ. ಬಿಡುಗಡೆಯಾದ ಒಂದು ದಿನದದಲ್ಲಿ ಐದೂವರೆ ಲಕ್ಷ ಮಂದಿ ಟ್ರೇಲರ್‌ ವೀಕ್ಷಿಸಿದ್ದಾರೆ. 

ಖ್ಯಾತ ಕಾದಂಬರಿಕಾರ ವಿಕ್ರಮ್ ಸೇಠ್ ಅವರ ಅದೇ ಹೆಸರಿನ ಕಾದಂಬರಿಯನ್ನು ಈ ಸೀರೀಸ್ ಆಧರಿಸಿದ್ದು, ಆ್ಯಂಡ್ರೂ ಡೇವಿಸ್ ಅವರು ಚಿತ್ರಕಥೆ ರಚಿಸಿದ್ದಾರೆ.‌ ‘ಎ ಸೂಟಬಲ್ ಬಾಯ್‘ –  ಉತ್ತರ ಭಾರತದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಲತಾಳ ಕತೆ ಹೇಳುವ ಸಿನಿಮಾ. ಈ ಕತೆ ನಡೆಯುವ ಸಮಯದಲ್ಲೇ ಭಾರತ, ತನ್ನ ಮೊದಲ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿರುತ್ತದೆ.   

2019ರ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಮುಗಿದಿದ್ದು, ಇದೇ ತಿಂಗಳಲ್ಲಿ ಮೊದಲ ಕಂತು ಪ್ರಸಾರವಾಗುತ್ತದೆ.  2006ರಲ್ಲಿ ನಾಟಕವೊಂದರಲ್ಲಿ ಜತೆಯಾಗಿದ್ದ ಮೀರಾ ಮತ್ತು ಟಬು, ಹದಿನಾಲ್ಕು ವರ್ಷಗಳ ನಂತರ ಈ ಸರಣಿ ಮೂಲಕ ಮತ್ತೆ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಇಶಾನ್ ಸೂಟಬಲ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಟಬು,ರಸಿಕಾ ದುಗ್ಗಲ್‌, ತಾನ್ಯಾ, ರಾಮ್‌ ಕಪೂರ್ ಮತ್ತಿತರರು ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು