ಶನಿವಾರ, ಅಕ್ಟೋಬರ್ 31, 2020
27 °C

ಅಕ್ಟೋಬರ್‌ನಲ್ಲಿ ‘ತ್ರಿಬಲ್‌ ರೈಡಿಂಗ್‌’ ಚಿತ್ರೀಕರಣ ಶುರು

. Updated:

ಅಕ್ಷರ ಗಾತ್ರ : | |

Prajavani

‘ಮರಿ ಟೈಗರ್’‌ ವಿನೋದ್‌ ಪ್ರಭಾಕರ್‌ ನಟನೆಯ ‘ರಗಡ್‌’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಮಹೇಶ್‌ಗೌಡ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿರುವ ‘ತ್ರಿಬಲ್‌ ರೈಡಿಂಗ್‌’ ಚಿತ್ರ ಚಾಲೂ ಮಾಡಲು ಸಜ್ಜಾಗಿದ್ದಾರೆ.

ಲವ್‌ ಮತ್ತು ಆ್ಯಕ್ಷನ್‌ ಪ್ರಧಾನವಾಗಿದ್ದ ‘ರಗಡ್‌’ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸದಿದ್ದರೂ ಒಂದಿಷ್ಟು ಗಳಿಕೆ ಮಾಡುವುದರಲ್ಲಿ ಹಿಂದೆ ಬೀಳದೆ, ಸಿನಿ ಮೋಹದ ಕಿಕ್‌ ಹೆಚ್ಚಿಸಿತು ಎನ್ನುವ ಖುಷಿಯಲ್ಲಿ ಮಹೇಶ್‌ಗೌಡ ‘ತ್ರಿಬಲ್‌ ರೈಡ್‌’ ಸವಾರಿ ಹೊರಟಿದ್ದಾರೆ. ಕಥೆ ಮತ್ತು ಚಿತ್ರಕಥೆಯೂ ಇವರದೇ.

ಮೈಸೂರು ಮತ್ತು ಊಟಿಯಲ್ಲಿ ಶೂಟಿಂಗ್‌ ಮಾಡಲು ಯೋಜಿಸಿದ್ದ ಅವರು ಕೋವಿಡ್‌ ಕಾರಣಕ್ಕೆ ಚಿತ್ರೀಕರಣದ ತಾಣ ಬದಲಿಸಿದ್ದು, ಬೆಂಗಳೂರಿನಲ್ಲೇ ಬಹುತೇಕ ಭಾಗವನ್ನು ಮತ್ತು ಊಟಿಯಲ್ಲಿ ಚಿತ್ರೀಕರಿಸಬೇಕಿದ್ದ ದೃಶ್ಯಗಳನ್ನು ಚಿಕ್ಕಮಗಳೂರಿನ ರಮ್ಯತಾಣಗಳಲ್ಲಿ ಚಿತ್ರೀಕರಿಸಲು ಯೋಜಿಸಿದ್ದಾರಂತೆ. ಮೊದಲ ಹಂತದಲ್ಲಿ 60 ದಿನಗಳ ಶೂಟಿಂಗ್‌ಗೆ ಯೋಜನೆ ರೂಪಿಸಿದ್ದು, ಗಣೇಶ್‌ ಜತೆಗೆ ಆರ್ಮುಗಂ ಪಾತ್ರ ಖ್ಯಾತಿಯ ರವಿಶಂಕರ್‌, ರಂಗಾಯಣ ರಘು, ಸಾಧು ಕೋಕಿಲ ಹಾಗೂ ಅಚ್ಯುತ್‌ಕುಮಾರ್‌ ಚಿತ್ರತಂಡವನ್ನು ಸದ್ಯದಲ್ಲೇ ಕೂಡಿಕೊಳ್ಳಲಿದ್ದಾರಂತೆ. ಇನ್ನು ನಾಯಕಿ ಮತ್ತು ಉಳಿದ ತಾರಾಬಳಗದ ಆಯ್ಕೆಯೂ ಇನ್ನಷ್ಟೇ ನಡೆಯಬೇಕಿದೆಯಂತೆ.

ಅಕ್ಟೋಬರ್‌ ಮೊದಲ ವಾರದಿಂದ ಶೂಟಿಂಗ್‌ ಶುರುವಾಗಲಿದೆ. ಗಣೇಶ್‌ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೋ ಅಥವಾ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೋ ಎನ್ನುವುದನ್ನು ಚಿತ್ರದ ಕುತೂಹಲ. ಹಾಗಾಗಿಯೇ ಟೈಟಲ್‌ ಕೂಡ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಂತೆಯೇ ಇದೆ ಎನ್ನುತ್ತಾರೆ ನಿರ್ದೇಶಕ ಮಹೇಶ್‌ಗೌಡ.

ಈ ಚಿತ್ರಕ್ಕೆ ಹಾಡುಗಳನ್ನು ಜಯಂತ ಕಾಯ್ಕಿಣಿ, ಚೇತನ್‌ಕುಮಾರ್‌, ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ. ಸಂಭಾಷಣೆಯನ್ನು ಮಹೇಶ್‌ಗೌಡ ಮತ್ತು ರಾಜಶೇಖರ್‌ ಕೂಡಿ ಬರೆದಿದ್ದಾರೆ. ಛಾಯಾಗ್ರಹಣ ಜಯಣ್ಣ, ಸಂಗೀತ ಸಾಯಿ ಕಾರ್ತಿಕ್‌ ಅವರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು