ಭಾನುವಾರ, ಡಿಸೆಂಬರ್ 15, 2019
23 °C

ಹರೆಯ ಹಿರಿಯರಿಗೆ ಹೊರೆಯಾ: 19 ಏಜ್ ನಾನ್ಸೆನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹತ್ತೊಂಬತ್ತರ ಹರೆಯವೇ ಅಂಥದ್ದು, ‍ಪೋಷಕರಿಗೂ ಆತಂಕವೇ. ಹದಿಹರೆಯದ ಈ ವಯಸ್ಸಿನಲ್ಲಿರುವವರು ನಾವು ಏನೂ ಮಾಡಿದರೂ ಸರಿ ಎಂದುಕೊಳ್ಳುತ್ತಾರೆ. ಬಿಸಿ ರಕ್ತದ ಮಕ್ಕಳು ಎಲ್ಲಿ ಹಾದಿ ತಪ್ಪಿಬಿಡುತ್ತಾರೋ ಎನ್ನುವ ಅಳುಕು ಪ್ರತಿ ಪೋಷಕರನ್ನು ಕಾಡುತ್ತಿರುತ್ತದೆ. ಇಂಥ ಅಂಶಗಳ ಸುತ್ತ ಹೆಣೆದಿರುವ ಕೌಟುಂಬಿಕ ಪ್ರೇಮಕಥೆಯ ‘19 ಏಜ್ ಈಸ್ ನಾನ್ಸೆನ್ಸ್?’ ಚಿತ್ರ ತೆರೆಕಾಣಲು ಸಜ್ಜಾಗಿದೆ. ಇದೇ ಶುಕ್ರವಾರ ರಾಜ್ಯದಾದ್ಯಂತ 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಚನೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಎಂ.ಗಿಣಿ ಹೊತ್ತಿದ್ದಾರೆ. ಹತ್ತೊಂಬತ್ತರ ಹರೆಯದ ಕಾಲೇಜು ಹುಡುಗನಾಗಿ ಮನುಷ್‌ ಬಣ್ಣ ಹಚ್ಚಿದ್ದಾರೆ. ನಾಯಕನಾಗಿ ಅವರಿಗೆ ಇದು ಮೊದಲ ಚಿತ್ರ. ಬೀದಿ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಮನುಷ್‌ ಬೆನ್ನಿಗಿದೆ. ತುಂಟಾಟದ ಹುಡುಗಿ, ನಾಯಕಿ ಪಾತ್ರದಲ್ಲಿ ಚೆನ್ನೈನ ಮಧುಮಿತಾ ನಟಿಸಿದ್ದಾರೆ. ಎರಡನೇ ನಾಯಕಿಯಾಗಿ ಲಕ್ಷ್ಮಿ ಮಂಡ್ಯ, ನಾಯಕಿ ತಾಯಿಯಾಗಿ ಕಾವ್ಯಪ್ರಕಾಶ್, ಮೇಸ್ತ್ರಿ ಚಿತ್ರದಲ್ಲಿ ನಟಿಸಿದ್ದ ನಟ ಬಾಲು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ರಾಮನಗರ, ಬೆಂಗಳೂರು ಸುತ್ತಮುತ್ತ 31 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದರು ನಿರ್ದೇಶಕ ಗಣಿ.

ಗೀತ ಸಾಹಿತಿ ನಾಗೇಂದ್ರಪ್ರಸಾದ್, ಅಜಯ್‍ ವೇದಾಂತಿ ಮತ್ತು ಗಣಿ ರಚಿಸಿರುವ ಐದು ಗೀತೆಗಳಿಗೆ ಎಸ್.ಕೆ.ಕುಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಜಿ.ವೆಟ್ರಿ, ಸಂಕಲನ ಗಣೇಶ್‍ನೀರ್ಚಾಲ್, ನೃತ್ಯ ಪವರ್‌ ಶಿವು, ಸಾಹಸ ಕೌರವ್‍ ವೆಂಕಟೇಶ್ ಅವರದ್ದು. ಮಗ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಉದ್ಯಮಿ ಎಸ್.ಲೋಕೇಶ್‌ ಬಂಡವಾಳ ಹೂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು