ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3.28 ಲಕ್ಷ ಕದ್ದ ಆರೋಪ: ಇಬ್ಬರು ಕಿರುತೆರೆ ನಟಿಯರ ಬಂಧನ

Last Updated 19 ಜೂನ್ 2021, 10:32 IST
ಅಕ್ಷರ ಗಾತ್ರ

ಮುಂಬೈ:ಇಲ್ಲಿನ ಗೊರೇಗಾಂವ್‌ ಉಪನಗರದಲ್ಲಿ ಕಳ್ಳತನ ಆರೋಪದಡಿಯಲ್ಲಿ ಮುಂಬೈ ಪೊಲೀಸರು ಇಬ್ಬರು ಕಿರುತೆರೆ ನಟಿಯರನ್ನು ಬಂಧಿಸಿದ್ದಾರೆ.

ಬಂಧಿತ ನಟಿಯರನ್ನು ಸುರಭಿ ಶ್ರೀವಾಸ್ತವ್ (25) ಮತ್ತು ಮೊಹ್ಸಿನಾ ಶೇಖ್ (19) ಎಂದು ಗುರುತಿಸಲಾಗಿದೆ. ಇವರು ₹ 3.28 ಲಕ್ಷ ಕದ್ದ ಆರೋಪದಲ್ಲಿ ಬಂಧಿತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಸಾವ್ಧಾನ್ ಇಂಡಿಯಾ' ಮತ್ತು 'ಕ್ರೈಮ್ ಪ್ಯಾಟ್ರೋಲ್' ಸೇರಿದಂತೆ ವಿವಿಧ ಧಾರಾವಾಹಿ ಹಾಗೂ ವೆಬ್‌ ಸರಣಿಗಳಲ್ಲಿ ನಟಿಸಿದ್ದಾರೆ. ಐಷಾರಾಮಿ ಪೇಯಿಂಗ್‌ ಗೆಸ್ಟ್‌ನಲ್ಲಿ ಉಳಿದುಕೊಂಡಿದ್ದ ಈ ನಟಿಯರು ಮಹಿಳೆಯೊಬ್ಬರ ಲಾಕರ್‌ನಿಂದ ಹಣ ಕದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಟಿವಿ ಪರಿಶೀಲಿಸಿದ ಪೊಲೀಸರು ನಟಿಯರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT