ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಜೆಸ್ಟಿಕ್‌’ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ದರ್ಶನ್‌

Last Updated 17 ಫೆಬ್ರುವರಿ 2022, 9:38 IST
ಅಕ್ಷರ ಗಾತ್ರ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಮೆಜೆಸ್ಟಿಕ್‌’ ತೆರೆಕಂಡು ಎರಡು ದಶಕಗಳು ಕಳೆದಿದ್ದು, ಶುಕ್ರವಾರ(ಫೆ.18) ಚಿತ್ರವು ರಿರಿಲೀಸ್‌ ಆಗುತ್ತಿದೆ. ಈ ಸಂದರ್ಭದಲ್ಲಿ ದರ್ಶನ್‌ ಸೇರಿದಂತೆ ಚಿತ್ರತಂಡದ ಹಲವರು ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ನಮ್ಮ ‘ಮೆಜೆಸ್ಟಿಕ್’ ಚಿತ್ರದ ಬಗೆಗಿನ ತಮ್ಮ ಅನುಭವಗಳನ್ನು ನಮ್ಮ ತಂಡದ ಪ್ರಮುಖ ಸದಸ್ಯರು ಇಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವೂ ಇದೇ ಫೆಬ್ರವರಿ 18 ರಂದು 20ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ’ ಎಂದು ಟ್ವೀಟ್‌ ಮಾಡಿರುವ ದರ್ಶನ್‌, ಡಿ–ಕಂಪನಿ ಯೂಟ್ಯೂಬ್‌ ಚಾನೆಲ್‌ ನಿರ್ಮಾಣ ಮಾಡಿರುವ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಡಿಯೊದಲ್ಲಿ ನಿರ್ಮಾಪಕ ಎಂ.ಜಿ.ರಾಮಮೂರ್ತಿ, ಸಹ ನಿರ್ಮಾಪಕ ರಮೇಶ್‌, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್‌, ಸಂಕಲನಕಾರ ನಾಗೇಂದ್ರ ಅರಸ್‌, ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟ ರಮೇಶ್‌ ಪಂಡಿತ್‌ ಅವರು ‘ಮೆಜೆಸ್ಟಿಕ್‌’ ಚಿತ್ರದ ಹುಟ್ಟು ಹಾಗೂ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

ದರ್ಶನ್‌ ಅವರ ಅದೃಷ್ಟ ಬದಲಾಯಿಸಿದ್ದ ಸಿನಿಮಾ ‘ಮೆಜೆಸ್ಟಿಕ್‌’, ಪಿ.ಎನ್.‌ ಸತ್ಯ ‌ನಿರ್ದೇಶನದಲ್ಲಿ ಮೂಡಿಬಂದಿತ್ತು. ದರ್ಶನ್‌, ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT