24 ಕಿಸ್‌ಗಳಿಗೆ 23 ಫಿಕ್ಸ್

7

24 ಕಿಸ್‌ಗಳಿಗೆ 23 ಫಿಕ್ಸ್

Published:
Updated:
Deccan Herald

ಟಾಲಿವುಡ್‌ನ ಹಲವು ಸಿನಿಮಾಗಳು ಈ ತಿಂಗಳಲ್ಲಿ ತೆರೆಕಾಣಲು ತುದಿಗಾಲಲ್ಲಿ ನಿಂತಿರುವುದರಿಂದ ನಿರ್ಮಾಪಕ– ನಿರ್ದೇಶಕರು, ತಮ್ಮ ಚಿತ್ರಗಳನ್ನು ಸಾಧ್ಯವಾದಷ್ಟು ಪೈಪೋಟಿ ಇಲ್ಲದಂತಹ ಸಂದರ್ಭಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ತೆಲುಗಿನ ‘ಕುಮಾರಿ 21ಎಫ್‌’ ಮತ್ತು ಕನ್ನಡದ ‘ಅಧ್ಯಕ್ಷ’ ಖ್ಯಾತಿಯ ಹೆಬ್ಬಾ ಪಟೇಲ್‌ ಮತ್ತು ಅದಿತ್ ಅರುಣ್ ಜೋಡಿಯಾಗಿ ನಟಿಸಿರುವ ‘24 ಕಿಸ್ಸೆಸ್‌’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಲಾಕ್‌ ಮಾಡಿದೆ. ಇದೇ 23ರಂದು ಚಿತ್ರವನ್ನು ತೆರೆಕಾಣಿಸಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಅನ್ನು 20ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಟ್ರೇಲರ್‌ನಲ್ಲಿ ತೋರಿಸಿರುವ ದೃಶ್ಯಗಳು ಯುವ ಸಮುದಾಯದ ಗಮನ ಸೆಳೆಯುವಂತೆ ಇರುವುದರಿಂದ ಉತ್ತಮ ಆರಂಭ ಸಿಗುವ ವಿಶ್ವಾಸದಲ್ಲಿದೆ ಚಿತ್ರ ತಂಡ.

‘ಮಿಣುಗುರು’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿರುವ ಅಯೋಧ್ಯ ಕುಮಾರ್ ಕೃಷ್ಣಂ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಟ ರಾವು ರಮೇಶ್‌ ಚಿತ್ರದಲ್ಲಿ ಮುಖ್ಯಪಾತ್ರವೊಂದನ್ನು ಪೋಷಿಸಿದ್ದಾರೆ. ಜೋಯ್ ಬರುವಾ ಸಂಗೀತ ಸಂಯೋಜನೆ ಮಾಡಿದ್ದಾರೆ. 

‘ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನಿರ್ಮಿಸಿದ್ದಾರೆ ಎಂದು, ಚಿತ್ರದ ಶೀರ್ಷಿಕೆ ಆಧರಿಸಿ ಹಲವರು ಹೇಳುತ್ತಿದ್ದಾರೆ. ಆದರೆ ಈ ಚಿತ್ರ ‘ಕ್ಲೀನ್ ಎಂಟರ್‌ಟೈನರ್‌’ ಆಗುವುದರಲ್ಲಿ ಸಂಶಯವಿಲ್ಲ’ ಎಂದು ಅಯೋಧ್ಯ ಕುಮಾರ್ ಹೇಳಿದ್ದಾರೆ. 

ದೊಡ್ಡ ಬ್ರೇಕ್‌ಗಾಗಿ ಕಾಯುತ್ತಿರುವ ಹೆಬ್ಬಾ ಪಟೇಲ್ ಮತ್ತು ಅದಿತ್ ಅವರಿಗೆ ‘24 ಮುತ್ತುಗಳು’ ಎಷ್ಟರ ಮಟ್ಟಿಗೆ ಸವಿ ನೀಡಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !