ಮಂಗಳವಾರ, ಮಾರ್ಚ್ 31, 2020
19 °C

ಸಲ್ಮಾನ್‌ ಅಕೌಂಟ್‌ಗೆ 3 ಕೋಟಿ ಹಿಂಬಾಲಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈಗ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸುದ್ದಿ ಮಾಡುತ್ತಿರುವುದು ’ಇನ್‌ಸ್ಟಾಗ್ರಾಂ‘. ಅದರಲ್ಲೂ ಸಿನಿಮಾ, ಮಾಡೆಲಿಂಗ್, ಕ್ರೀಡಾಕ್ಷೇತ್ರದ ತಾರೆಯರಿಗೆ ಇದೊಂದು ಅಚ್ಚುಮೆಚ್ಚಿನ ತಾಣ.

ಟ್ವಿಟರ್‌ ಅನ್ನೂ ಹಿಂದಿಕ್ಕಿರುವ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯನ್ನು ಎಷ್ಟು ಅಭಿಮಾನಿಗಳು ಫಾಲೋ ಮಾಡುತ್ತಾರೆಂಬುವುದೇ ಹೆಗ್ಗಳಿಕೆಯ ವಿಷಯವಾಗಿದೆ. 

ಈಗ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಅಭಿಮಾನಿಗಳಿಗೆ ‘ಥ್ಯಾಂಕ್ಸ್‘ ಹೇಳಿದ್ದಾರೆ. ಏಕೆಂದರೆ, ಇವರ ಅಕೌಂಟ್‌ ಅನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 3 ಕೋಟಿ ಮುಟ್ಟಿದೆ !

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಸಲ್ಮಾನ್‌ ಖಾನ್‌, ‘ಓಐ ಮಾ... 3 ಕೋಟಿ!’ ಫಾಲೊವರ್ಸ್‌ ಎಂದು ಖುಷಿಪಟ್ಟಿದ್ದಾರೆ. ‘ಬೂಮರಾಂಗ್’ ವಿಡಿಯೊ ಮಾಡಿ ಅಭಿಮಾನಿಗಳಿಗೆ ಕೈಮುಗಿದು ನಮಸ್ಕಾರ ಮಾಡಿದ್ದಾರೆ. ಈ ಪುಟ್ಟ ವಿಡಿಯೊಗೂ ಸಾವಿರಾರು ಅಭಿಮಾನಿಗಳು ‘ಐ ಲವ್‌ ಯು ಸಲ್ಮಾನ್‌’ ಎಂದು ಕಮೆಂಟ್‌ ಮಾಡಿದ್ದಾರೆ.

ಬಿಗ್‌ಬಾಸ್‌ 13ನೇ ಆವೃತ್ತಿಯನ್ನು ಈಗಷ್ಟೆ ಮುಗಿಸಿರುವ ಸಲ್ಮಾನ್‌ ತಮ್ಮ ಮುಂದಿನ ಸಿನಿಮಾ ‘ರಾಧೆ’ ಬಿಡುಗಡೆ ನಿರೀಕ್ಷೆಯಲ್ಲಿ ಇದ್ದಾರೆ. ದಿಶಾ ಪಟಾನಿ ನಾಯಕಿಯಾಗಿರುವ ಈ ಸಿನಿಮಾ 2020ರ ಈದ್‌ಗೆ ಬಿಡುಗಡೆಗೊಳ್ಳಲಿದೆ. ಸಾಜಿದ್ ನಡಿಯಾವಾಲಾ ನಿರ್ಮಾಣದ ‘ಕಬಿ ಈದ್–ಕಬಿ ದಿವಾಲಿ’ ಸಿನಿಮಾದಲ್ಲಿ ಕೃತಿ ಸೇನಾನ್‌ ಜೊತೆ ಅಭಿನಯಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು