‘ಸಂಜು’ ಸಿನಿಮಾಕ್ಕೆ 4 ಪ್ರಶಸ್ತಿ

7

‘ಸಂಜು’ ಸಿನಿಮಾಕ್ಕೆ 4 ಪ್ರಶಸ್ತಿ

Published:
Updated:
Deccan Herald

ನಟ ಸಂಜಯ್‌ದತ್ ಜೀವನದ ಕಥಾ ಹಂದರವುಳ್ಳ ‘ಸಂಜು’ ಸಿನಿಮಾ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬರ್ನ್‌’ನಲ್ಲಿ (ಐಎಫ್‌ ಎಫ್‌ಎಂ) ‘ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ನಿರ್ದೇಶನ’ ಸೇರಿದಂತೆ ನಾಲ್ಕು ವಿಭಾಗಗಳ ಪ್ರಶಸ್ತಿಗಳಿಗೆ ಭಾಜನವಾಗಿದೆ.

ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಎಂದೇ ಖ್ಯಾತರಾದ ರಾಜ್‌ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ನಟ ರಣಬೀರ್ ಕಪೂರ್ ಇದರಲ್ಲಿ ಸಂಜಯ್‌ದತ್ ಪಾತ್ರಧಾರಿಯಾಗಿ ನಟಿಸಿದ್ದಾರೆ. ಸಂಜಯ್‌ದತ್ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ರಣಬೀರ್‌ ಕಪೂರ್‌ಗೆ ‘ವ್ಯಾನ್‌ಗಾರ್ಡ್ ಪ್ರಶಸ್ತಿ’ ದಕ್ಕಿದ್ದು, ವಿಕ್ಕಿ ಕೌಶಾಲ್ ‘ಅತ್ಯುತ್ತಮ ಫೋಷಕ ಪಾತ್ರ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಹಿರಾನಿ ಸಂತಸಗೊಂಡಿದ್ದು, ‘ಪ್ರಶಸ್ತಿ ಸಿಕ್ಕಿರುವುದಕ್ಕೆ ಅತ್ಯಂತ ವಿನೀತನಾಗಿದ್ದೇನೆ. ನಮ್ಮ ಶ್ರಮಕ್ಕೆ ಈ ಚಿತ್ರೋತ್ಸವದಲ್ಲಿ ಗೌರವ ಸಿಕ್ಕಿದೆ. ಮೆಲ್ಬರ್ನ್‌ ನಗರವನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !