ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IFFI Goa: 9 ದಿನಗಳ ಸಿನಿಮಾ ಮೇಳ; 280 ಚಿತ್ರಗಳ ಪ್ರದರ್ಶನ

Last Updated 18 ನವೆಂಬರ್ 2022, 15:53 IST
ಅಕ್ಷರ ಗಾತ್ರ

ಬೆಂಗಳೂರು: 53ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ -ಇಫ್ಫಿ ಗೋವಾದಲ್ಲಿ ನವೆಂಬರ್‌ 20ರಿಂದ ಆರಂಭಗೊಳ್ಳಲಿದೆ.

ಸುಮಾರು 79 ದೇಶಗಳು ಪಾಲ್ಗೊಳ್ಳಲಿದ್ದು, 9 ದಿನಗಳ ಕಾಲ ನಡೆಯಲಿರುವ ಸಿನಿಮಾ ಮೇಳದಲ್ಲಿ ಸುಮಾರು 280 ಚಿತ್ರಗಳು ಪ್ರದರ್ಶನ ಕಾಣಲಿವೆ. ತಲೈಗಾವೊದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮೋತ್ಸವ ನಡೆಯಲಿದೆ.

ಡಯಟರ್ ಬರ್ನರ್ ನಿರ್ದೇಶನದ ಆಸ್ಟ್ರಿಯಾದ ಅಲ್ಮಾ ಮತ್ತು ಆಸ್ಕರ್ ಚಿತ್ರಗಳು ಚಿತ್ರೋತ್ಸವಕ್ಕೆ ಚಾಲನೆ ನೀಡಲಿವೆ. ಭಾರತದ 25 ಸಿನಿಮಾಗಳು ಮತ್ತು 19 ಸಾಕ್ಷ್ಯಚಿತ್ರ (ನಾನ್-ಫೀಚರ್)ಗಳು ಪ್ರದರ್ಶನಗೊಳ್ಳಲಿವೆ.

ಉತ್ಸವದ ನಿರ್ದೇಶಕ ಮತ್ತು ಎನ್.ಎಫ್.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ, ರವೀಂದರ್ ಭಾಕರ್, ಇಎಸ್‌ಜಿ ಸಿಇಒ ಶ್ವೇತಾ ಸಚನ್, ಪಿಐಬಿಯ ಮಹಾನಿರ್ದೇಶಕ ಮೋನಿದೀಪಾ ಮುಖರ್ಜಿ ಮತ್ತು ಪಿಐಬಿಯ ಹೆಚ್ಚುವರಿ ಮಹಾನಿರ್ದೇಶಕ ಪ್ರಾಗ್ಯಾ ಪಲಿವಾಲ್ ಗೌರ್ ಅವರು ಪಣಜಿಯ ಹಳೆ ಜಿಎಂಸಿ ಕಟ್ಟಡದಲ್ಲಿ ಶುಕ್ರವಾರ ನಡೆದ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಾಹಿತಿ ನೀಡಿದರು.

53ನೇ ಇಫ್ಫಿಯಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳು ಹಾಗೂ ಮತ್ತಿತರ ಮಾಹಿತಿಗೆ: IFFI Goa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT