ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಿಕಾ–ರಣವೀರ್ ಮೀರಿಸಿದ ‘ಸ್ನೋ ಲೇಡಿ’

Last Updated 27 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಬಾಲಿವುಡ್‌ನ ಮುದ್ದಾದ ಜೋಡಿ ಎಂದೇ ಖ್ಯಾತರಾದ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಈಚೆಗೆ ಇಟಲಿಯ ಲೇಕ್ ಕೊಮೊ ತೀರದಲ್ಲಿ ಹಸೆಮಣೆ ಏರಿದ್ದರು. ಅವರ ವಿವಾಹದ ಒಂದೇ ಒಂದು ಫೋಟೊಗಾಗಿ ಕೋಟ್ಯಂತರ ಮಂದಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ಫೋಟೊಗಳು ಹೊರಬಿದ್ದ ಕೂಡಲೇ ಅವುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಸಾಕಷ್ಟು ಮಂದಿ ಹೊಗಳಿಕೆಯ ನುಡಿಗಳನ್ನಾಡಿದ್ದರು. ಆದರೆ, ರಣವೀರ್ ಹಾಗೂ ದೀಪಿಕಾ ಜೋಡಿಯ ಫೋಟೊಗಳನ್ನೇ ಮೀರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೋ ಲೇಡಿಯ ಫೋಟೊವೊಂದು ವೈರಲ್ ಆಗಿದೆ.

ಕೇನಡಾದ ವಾಸಿ ಭಾರತೀಯ ಮೂಲದ ಜಸ್ಸಿ ಕಿಂಗ್ರಾ ಹಾಗೂ ದಲ್ಜಿತ್‌ ಎಂಬುವರು ತಮ್ಮ ಮನೆಯ ಅಂಗಳದಲ್ಲಿ ಸಡ್ಡಿ ಜ್ಯೂಲಿಯೇಟ್ ಎಂಬ ಮಂಜಿನ ಮಹಿಳೆಯನ್ನು ಸೃಷ್ಟಿಸಿದ್ದರು. ಅದಕ್ಕೆ ಥೇಟ್ ಮದುಮಗಳಂತೆಯೇ ಸಿಂಗರಿಸಿದ್ದರು. ಸಾಲದಕ್ಕೆ, ಸಡ್ಡಿಗೆ ಕೆಂಪು ಬಣ್ಣದ ದುಪ್ಪಟ್ಟಾ ಹೊದಿಸಿ, ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿದ್ದರು.

ಅದರ ಫೋಟೊವನ್ನು ದೀಪಿಕಾ ಹಾಗೂ ರಣವೀರ್ ಜೋಡಿಗೆ ಸ್ಪರ್ಧಿಯೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಅಷ್ಟೇ ನೋಡಿ, ಸಿಕ್ಕಾಪಟ್ಟೆ ವೈರಲ್ ಆದ ಆ ಫೋಟೊ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT