ಒಬ್ಬ ಹೀರೊ, 6 ನಾಯಕಿಯರು...ಇದು ‘ಸೆವೆನ್‌’!

ಭಾನುವಾರ, ಮೇ 26, 2019
32 °C

ಒಬ್ಬ ಹೀರೊ, 6 ನಾಯಕಿಯರು...ಇದು ‘ಸೆವೆನ್‌’!

Published:
Updated:
Prajavani

ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾಗಳನ್ನು ಸಾಕಷ್ಟು ನೋಡಿದ್ದೇವೆ. ಒಬ್ಬ ನಾಯಕನಿಗೆ ಇಬ್ಬರು ನಾಯಕಿಯರು, ಒಬ್ಬಳೇ ನಾಯಕಿಗೆ ಒಬ್ಬರು ನಾಯಕರು... ಹೀಗೆ. ಆದರೆ ಇಲ್ಲೊಂದು ಹೊಸ ಬಗೆಯ ಚಿತ್ರ ತೆರೆಕಾಣಲು ಸಿದ್ಧವಾಗುತ್ತಿದೆ.

ಒಬ್ಬ ನಾಯಕನಿಗೆ ಒಬ್ಬಿಬ್ಬರಲ್ಲ ಬರೋಬ್ಬರಿ ಆರು ಮಂದಿ ಹೀರೊಯಿನ್‌ಗಳು! ಒಟ್ಟು ಎಷ್ಟು ಜನ ಆದರು? ಏಳು ತಾನೇ? ಅದೇ ಚಿತ್ರದ ಶೀರ್ಷಿಕೆ! 

ಹೌದು, ತೆಲುಗಿನ ‘ಸೆವೆನ್‌’ ಚಿತ್ರದ ವೈಶಿಷ್ಟ್ಯವಿದು. ‘ಜೀನಿಯಸ್‌’ ಖ್ಯಾತಿಯ ಹವಿಶ್‌, ಆರು ಹೀರೊಯಿನ್‌ಗಳೊಂದಿಗೆ ಡುಯೆಟ್‌ ಹಾಡಿರುವ ‘ಅದೃಷ್ಟಶಾಲಿ’ ನಾಯಕನಟ. ರೆಜಿನಾ, ನಂದಿತಾ ಶ್ವೇತಾ, ಪೂಜಿತಾ ಪೊನ್ನಾಡ, ಅನಿಶಾ ಅಂಬ್ರೋಸ್‌, ಅದಿತಿ ಆರ್ಯ ಮತ್ತು ತ್ರೀಡಾ ಚೌಧರಿ ಈ ಚಿತ್ರದ ನಾಯಕನಟಿಯರು.

ನಿರ್ದೇಶಕ ನಿಸಾರ್‌ ಶಫಿ ಅವರ ಮಾತಿನಲ್ಲೇ ಹೇಳುವುದಾದರೆ, ಆರೂ ಮಂದಿ ಹೀರೊಯಿನ್‌ಗಳಿಗೆ ಪ್ರತ್ಯೇಕವಾದ ಚಿತ್ರಕತೆ ಮತ್ತು ಪಾತ್ರದ ಮಹತ್ವವಿದೆ. ರೊಮ್ಯಾಂಟಿಕ್‌ ಥ್ರಿಲ್ಲರ್‌ ಚಿತ್ರ ತಮ್ಮದು ಎಂದು ಶಫಿ ಹೇಳುತ್ತಾರೆ. 

ನಿಸಾರ್ ಶಫಿ, ಸಿನೆಮಾಟೊಗ್ರಾಫರ್‌ ಆಗಿ ಟಾಲಿವುಡ್‌ನಲ್ಲಿ ಹೆಸರು ಮಾಡಿದವರು. ಆದರೆ ಆ್ಯಕ್ಷನ್‌– ಕಟ್‌ ಹೇಳುವ ಉಮೇದು ಅವರದು. ‘ಆರ್‌ಎಕ್ಸ್‌100’ ಚಿತ್ರದ ಮೂಲಕ ತಾರಾ ವರ್ಚಸ್ಸು ಹೆಚ್ಚಿಸಿಕೊಂಡ ಸಂಗೀತ ಸಂಯೋಜಕ ಚೈತನ್ ಭಾರದ್ವಾಜ್‌ ‘ಸೆವೆನ್‌’ಗೆ ಸಂಗೀತ ನೀಡಿದ್ದಾರೆ. ರಮೆಶ್‌ ವರ್ಮ ಚಿತ್ರಕತೆ ಬರೆದು ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಆರು ಮಂದಿ ಹೀರೊಯಿನ್‌ಗಳಿರುವುದೇ ಥ್ರಿಲ್‌. ಆ ಥ್ರಿಲ್‌ಅನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ಕತೆ ಮತ್ತು ಸಂಭಾಷಣೆಯನ್ನು ಹೊಸೆಯಲಾಗಿದೆ ಎಂದು ವರ್ಮ ಹೇಳಿದ್ದಾರೆ. ಮೇ ಮೊದಲ ವಾರದಲ್ಲಿ ಚಿತ್ರ ತೆರೆಕಾಣುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !