‘ಮಾಸ್‌–ಕ್ಲಾಸ್‌’ ಜೋಡಿಯ ಡುಯೆಟ್‌

ಮಂಗಳವಾರ, ಮಾರ್ಚ್ 26, 2019
33 °C

‘ಮಾಸ್‌–ಕ್ಲಾಸ್‌’ ಜೋಡಿಯ ಡುಯೆಟ್‌

Published:
Updated:
Prajavani

ಕರೀನಾ ಕಪೂರ್ ಖಾನ್‌ ಮಾತಿನಲ್ಲೇ ಹೇಳುವುದಾದರೆ, ‘ಮಾಸ್‌ ಮತ್ತು ಕ್ಲಾಸ್‌ ಜೋಡಿ’ ತೆರೆಯಲ್ಲಿ ಡುಯೆಟ್‌ ಹಾಡಲಿದೆ. ಕರೀನಾ ಪ್ರಕಾರ ಕಾರ್ತಿಕ್‌ ಆರ್ಯನ್‌ ಮಾಸ್‌ ಆದರೆ, ಸಾರಾ ಕ್ಲಾಸ್‌! 

ಹಳೆಯ ಸಿನಿಮಾಗಳ ಹೊಸ ಅವತರಣಿಕೆಯ ಶಕೆಯಲ್ಲಿ ಸೆಟ್ಟೇರಲಿರುವ ‘ಲವ್‌ ಆಜ್‌ ಕಲ್‌’ನಲ್ಲಿ ಈ ಹಾಟ್‌ ಜೋಡಿ ಒಂದಾಗಲಿದೆ. ಇಮ್ತಿಯಾಜ್‌ ಅಲಿ ನಿರ್ದೇಶನದಲ್ಲಿ ‘ಲವ್‌ ಆಜ್‌ ಕಲ್‌ 2’ ಸೆಟ್ಟೇರಲಿದೆ. ಸಾರಾ ಈಗಾಗಲೇ ಸಹಿ ಹಾಕಿದ್ದು, ಕಾರ್ತಿಕ್‌ ಕಾಲ್‌ಶೀಟ್‌ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ. 

ಕಾರ್ತಿಕ್‌ ಮತ್ತು ರಣದೀಪ್‌ ಹೂಡಾ ಈ ಚಿತ್ರದಲ್ಲಿ ನಾಯಕ ನಟರು. ಹಾಗಾಗಿ ತ್ರಿಕೋನ ಪ್ರೇಮ ಕತೆಯ ಚಿತ್ರದಲ್ಲಿ ಇಬ್ಬರು ನಾಯಕರೊಂದಿಗೆ ಸುಂದರಿ ಸಾರಾ ಡುಯೆಟ್‌ ಹಾಡುವುದು ಖಚಿತವಾಗಿದೆ. ‘ಲವ್‌ ಆಜ್‌ ಕಲ್‌’ನ ಮೊದಲ ಆವೃತ್ತಿಯಂತೆ ಎರಡನೇ ಕಂತು ಕೂಡಾ ಭಾರತದಲ್ಲೇ ಚಿತ್ರೀಕರಣವಾಗಲಿದೆ. ಪಂಜಾಬ್‌ ಮತ್ತು ದೆಹಲಿಯಲ್ಲಿ ಬಹುತೇಕ ಸನ್ನಿವೇಶ ಮತ್ತು ಹಾಡುಗಳ ಚಿತ್ರೀಕರಣ ನಡೆಯಲಿದೆ. 

ಕಾರ್ತಿಕ್‌ಗೆ ಇಮ್ತಿಯಾಜ್‌ ಚಿತ್ರಗಳೆಂದರೆ ಬಹಳ ಇಷ್ಟವಂತೆ. ಹಾಗಾಗಿ ಸಿಕ್ಕಿರುವ ಅವಕಾಶವನ್ನು ಕೈಚೆಲ್ಲಲು ಅವರು ಸಿದ್ಧರಿಲ್ಲ. ಚಿತ್ರೀಕರಣದ ಮುಹೂರ್ತ ಇನ್ನೂ ನಿಗದಿಯಾಗಿಲ್ಲ. ಅಲ್ಲದೆ ತಾರಾಗಣದಲ್ಲಿ ಇನ್ಯಾರು ಇರುತ್ತಾರೆ ಎಂಬುದೂ ಅಂತಿಮಗೊಂಡಿಲ್ಲ.


ಕಾರ್ತಿಕ್‌ ಆರ್ಯನ್‌

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !