ಗನ್ ಹಿಡಿದ ನವರಸ ನಾಯಕ

7

ಗನ್ ಹಿಡಿದ ನವರಸ ನಾಯಕ

Published:
Updated:
Deccan Herald

‘8ಎಂಎಂ’ ಎಂಬುದು ಬುಲೆಟ್‌ನ ಸೈಜ್‌ ಆಗಿದೆ. ನವರಸ ನಾಯಕ ಜಗ್ಗೇಶ್‌ ನಟಿಸಿರುವ ಇದೇ ಹೆಸರಿನ ಚಿತ್ರ ತೆರೆಕಾಣಲು ಸಜ್ಜಾಗಿದ್ದು, ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಜಗ್ಗೇಶ್‌ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿ ಮೂರೂವರೆ ದಶಕ ಉರುಳಿದೆ. ಅವರು ಕಾಮಿಡಿ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ಈ ಚಿತ್ರದ ಮೂಲಕ ಅವರು ವೃತ್ತಿಬದುಕಿನ ಭಿನ್ನ ಹಾದಿಗೆ ಹೊರಳಿರುವುದು ವಿಶೇಷ.  

ಈಗಾಗಲೇ, ಬಿಡುಗಡೆಯಾಗಿರುವ ಈ ಸಿನಿಮಾದ ಟ್ರೇಲರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಚಿತ್ರಕ್ಕೆ ಎಸ್‌. ಹರಿಕೃಷ್ಣ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ನಾನು ಇಲ್ಲಿಯವರೆಗೆ ನೂರೈವತ್ತಕ್ಕೂ ಹೆಚ್ಚು ಚಿತ್ರಗಳನ್ನು ಪ್ರೇಕ್ಷಕರು, ಅಭಿಮಾನಿಗಳಿಗಾಗಿ ಮಾಡಿದ್ದೇನೆ. ನನಗಾಗಿ ಈ ಚಿತ್ರ ಮಾಡಿದ್ದೇನೆ. ಎಲ್ಲರೂ ಇದನ್ನು ನೋಡಿ ಪ್ರೋತ್ಸಾಹಿಸಬೇಕು’ ಎಂದು ಜಗ್ಗೇಶ್‌ ಕೋರಿದ್ದಾರೆ.

ಅವರು ಯಾವುದೇ ಚಿತ್ರದಲ್ಲಿ ನಟಿಸಿದರೂ ಹಲವು ಟೇಕ್‌ಗಳನ್ನು ತೆಗೆದುಕೊಳ್ಳುವುದು ವಿರಳ. ‘8ಎಂಎಂ’ನಲ್ಲಿ ಅವರು ಐದು ಮತ್ತು ನಾಲ್ಕೂವರೆ ನಿಮಿಷದ ಎರಡು ದೃಶ್ಯಗಳನ್ನು ಒಂದೇ ಟೇಕ್‌ನಲ್ಲಿ ಮುಗಿಸಿದ್ದಾರಂತೆ. ‘ವ್ಯಕ್ತಿಯೊಬ್ಬ ತನ್ನ ಬದುಕಿನ ಪುಟಗಳನ್ನು ತೆರೆದಿರುವ ಸನ್ನಿವೇಶವದು. ಒಂದೇ ಟೇಕ್‌ನಲ್ಲಿ ಮುಗಿಸುವುದಾಗಿ ನಿರ್ದೇಶಕರಿಗೆ ಕೇಳಿಕೊಂಡೆ. ಇದಕ್ಕೆ ಅವರು ಅವಕಾಶ ನೀಡಿದರು. ನಾನು ಸಾಕಷ್ಟು ತಯಾರಿ ಮಾಡಿಕೊಂಡ ನಂತರವೇ ಚಿತ್ರೀಕರಣಕ್ಕೆ ಮುಂದಾದರು. ಈ ದೃಶ್ಯಗಳಲ್ಲಿ ನೈಜವಾಗಿ ಅಭಿನಯಿಸಿದ್ದೇನೆ. ಕಣ್ಣೀರು ಸುರಿಸಿದ್ದೇನೆ’ ಎನ್ನುವ ನವರಸ ನಾಯಕನಿಗೆ ಒಮ್ಮೆಯಾದರೂ ಆ್ಯಕ್ಷನ್‌ ಚಿತ್ರದಲ್ಲಿ ಅಭಿನಯಿಸುವ ಆಸೆ ಇದೆಯಂತೆ.

ನಟರಾದ ವಸಿಷ್ಠ ಸಿಂಹ, ರಾಕ್‌ಲೈನ್‌ ವೆಂಕಟೇಶ್‌, ಆದಿ ಲೋಕೇಶ್‌, ನಟಿ ಮಯೂರಿ ನಟಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ನಾರಾಯಣ ಸ್ವಾಮಿ, ಇನ್ಫೆಂಟ್‌ ಪ್ರದೀಪ್, ಸಲೀಂ ಷಾ ಬಂಡವಾಳ ಹೂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !