ಸೋಮವಾರ, ಅಕ್ಟೋಬರ್ 3, 2022
24 °C

‘ನೈಂಟಿ ಬಿಡಿ ಮನೀಗ್‌ ನಡಿ’ ಟೀಸರ್‌ ಬಿಡುಗಡೆ ಮಾಡಿದ ನಟ ಶರಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ 500ನೇ ಚಿತ್ರ, ‘ನೈಂಟಿ ಬಿಡಿ ಮನೀಗ್‌ ನಡಿ’ ಚಿತ್ರದ ಟೀಸರನ್ನು ನಟ ಶರಣ್‌ ಇತ್ತೀಚೆಗೆ ಬಿಡುಗಡೆ ಮಾಡಿದರು. 

‘ಅಮ್ಮ ಟಾಕೀಸ್ ಬಾಗಲಕೋಟೆ’ ಸಂಸ್ಥೆಯ ನಿರ್ಮಾಣದ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಎ2 ಮ್ಯೂಸಿಕ್‌ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ. 

ಟೀಸರ್‌ ಬಿಡುಗಡೆ ಮಾಡಿ ಖುಷಿ ವ್ಯಕ್ತಪಡಿಸಿದ ಶರಣ್‌, ‘ಬಿರಾದಾರ್ ಅವರು ನನ್ನ ತಂದೆಯ ಒಡನಾಡಿಯಾಗಿದ್ದು, ಅದೇ ಅಭಿಮಾನದೊಂದಿಗೆ ‘ನೈಂಟಿ’ಗೆ ಜೊತೆಯಾಗಿದ್ದಾರೆ. ನಾವು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು. ಮಿಗಿಲಾಗಿ ಇವರೊಬ್ಬ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು. ಇಂಥವರ ನಟನೆಯ ಐನೂರನೇ ಸಿನಿಮಾ ಎಂಬುದೇ ನಮ್ಮೆಲ್ಲರ ಹೆಮ್ಮೆ’ ಎಂದರು.

‘ನೈಂಟಿ...’ ಟೀಸರ್‌ ನೋಡಿದಾಗ ಇಲ್ಲಿ ಕೇವಲ ಕುಡಿತ, ಮದ್ಯ ಇತ್ಯಾದಿ ವಿಷಯಗಳಷ್ಟೇ ಇಲ್ಲ. ಕುತೂಹಲ, ಥ್ರಿಲ್ಲರ್‌ ಮತ್ತು ಸಾಹಸ ಅಂಶಗಳ ಕಥಾ ಹಂದರವಿದೆ ಎಂದಿದೆ ಚಿತ್ರ ತಂಡ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು