ಅಮೀರ್ಆಸ್ತಿ ಖರೀದಿ

ಶನಿವಾರ, ಜೂಲೈ 20, 2019
25 °C
ಅಮೀರ್ ಖಾನ್

ಅಮೀರ್ಆಸ್ತಿ ಖರೀದಿ

Published:
Updated:
Prajavani

ಬೆಳ್ಳಿತೆರೆಯಿಂದ ಕೆಲಕಾಲ ಮರೆಯಾಗಿರುವ ಅಮೀರ್ ಖಾನ್ ಈಗೇನು ಮಾಡುತ್ತಿರಬಹುದು ಅನ್ನುವ ಪ್ರಶ್ನೆ ಆತನ ಅಭಿಮಾನಿಗಳದ್ದು. ಸೃಜನಶೀಲವಾಗಿರುವ ಅಮೀರ್ ಸುಮ್ಮನೆ ಕೂರುವ ಜಾಯಮಾನದವರಲ್ಲ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಏನಾದರೊಂದು ಸುದ್ದಿ ಹಂಚಿಕೊಳ್ಳುವ ಅಮೀರ್, ತಮ್ಮ ಪ್ರೊಡಕ್ಷನ್ ಹೌಸ್ ವಿಸ್ತರಣೆಗಾಗಿ ಈಚೆಗೆ ಆಸ್ತಿ ಖರೀದಿಸಿದ್ದಾರಂತೆ. 

ವಾಣಿಜ್ಯ ಉದ್ದೇಶ ಮತ್ತು ಪ್ರೊಡಕ್ಷನ್  ಹೌಸ್ ವಿಸ್ತರಣೆಗಾಗಿ ಅಮೀರ್ ಸುಮಾರು ₹ 35 ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರಂತೆ. ಈ ಸ್ಥಳವನ್ನು ‘ಅಮೀರ್ ಖಾನ್ ಪ್ರೊಡಕ್ಷನ್ ಪ್ರೈ. ಲಿ.’ ಹೆಸರಿನಲ್ಲಿಯೇ ಅಮೀರ್ ನೋಂದಣಿ ಮಾಡಿಸಲಿದ್ದಾರಂತೆ. 

ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಶೀಘ್ರದಲ್ಲೇ ಹೊಸ ಸಿನಿಮಾವೊಂದರಲ್ಲಿ ನಟಿಸಲಿದೆ.

Post Comments (+)