ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನೋಡಿ ಭಾವುಕರಾದ ಅಮೀರ್‌ ಖಾನ್‌! ಆ ಚಿತ್ರ ಯಾವುದು?

Last Updated 3 ಮಾರ್ಚ್ 2022, 6:38 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸ್ಟಾರ್‌ ನಟ ಅಮೀರ್‌ ಖಾನ್‌ ಹಿಂದಿ ಸಿನಿಮಾನೋಡಿ ಭಾವುಕರಾಗಿದ್ದಾರೆ. ಸಿನಿಮಾ ನಿರ್ದೇಶಕ, ಮಕ್ಕಳು ಸೇರಿದಂತೆ ವಿವಿಧ ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಿ ಅಭಿನಯದ ’ಝುಂಡ್‌’ ಸಿನಿಮಾವನ್ನು ಅಮೀರ್‌ ಖಾನ್‌ ವೀಕ್ಷಣೆ ಮಾಡಿದ್ದಾರೆ.ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅವರಿಗಾಗಿ ಆಯೋಜಿಸಲಾಗಿತ್ತು. ಸಿನಿಮಾ ನೋಡಿಅಮೀರ್ ಖಾನ್ಕಣ್ಣೀರು ಹಾಕಿದ್ದಾರೆ. ಇಂತಹ ಸಿನಿಮಾವನ್ನು ನಾನು ಇತ್ತೀಚಿನ ದಿನಗಳಲ್ಲಿ ನೋಡಿಯೇ ಇಲ್ಲ ಎಂದಿದ್ದಾರೆ.

ಚಿತ್ರದಲ್ಲಿನ ಮಕ್ಕಳ ನಟನೆಯನ್ನು ಮೆಚ್ಚಿಕೊಂಡು, ಬಿಗ್‌ಬಿನಟನೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಕತೆ, ಚಿತ್ರಕತೆ ಬಗ್ಗೆ ಮೆಚ್ಚುಗೆ ಸೂಚಿಸಿ,ನೀವು ಭಾವನೆಗಳನ್ನು ಹಿಡಿದಿಟ್ಟು ಸಿನಿಮಾ ಮಾಡಿದ್ದೀರಿ ಎಂದು ನಿರ್ದೇಶಕ ನಾಗರಾಜ್‌ ಮಂಜುಳೆ ಅವರನ್ನು ಹೊಗಳಿದ್ದಾರೆ.

ದೇಶದಾದ್ಯಂತ ’ಝುಂಡ್‌’ ಸಿನಿಮಾ ಮಾರ್ಚ್‌ 4ರಂದು ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆಗೆ ಮುನ್ನ ಅಮೀರ್‌ ಖಾನ್‌ ಅವರಿಗೆ ಈ ಸಿನಿಮಾ ತೋರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಈ ಚಿತ್ರವು ಸ್ಲಂ ಮಕ್ಕಳು ಫುಟ್‌ಬಾಲ್‌ ಕಲಿಯುವ ಕಥಾ ಹಂದರವನ್ನು ಹೊಂದಿದೆ. ಬಡ ಮಕ್ಕಳಿಗೆ ಫುಟ್ಬಾಲ್​​ ತಂಡ ಕಟ್ಟಲು ನೆರವು ನೀಡುವ ಪಾತ್ರದಲ್ಲಿ ಅಮಿತಾಭ್‌ ನಟಿಸಿದ್ದಾರೆ.

ಮರಾಠಿಯ 'ಸೈರಾಟ್' ಸಿನಿಮಾದ ನಿರ್ದೇಶಕ ನಾಗರಾಜ್ ಮಂಜುಳೆ ಅವರು 'ಝುಂಡ್' ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT