ಭಾನುವಾರ, ಅಕ್ಟೋಬರ್ 24, 2021
28 °C

ಅಮೀರ್‌ ನಟನೆಯ ’ಲಾಲ್‌ ಸಿಂಗ್‌ ಚಡ್ಡಾ’ ಚಿತ್ರ 2022ರ ’ಪ್ರೇಮಿಗಳ ದಿನ’ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಮಿಸ್ಟರ್‌ ಪರ್‌ಫೆಕ್ಷನಿಷ್ಟ್‌ ಅಮೀರ್‌ ಖಾನ್‌ ಅವರು ನಟಿಸುತ್ತಿರುವ ಲಾಲ್‌ ಸಿಂಗ್‌ ಚಡ್ಡಾ ಚಿತ್ರ 2022ರ ಪ್ರೇಮಿಗಳ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಈ ಬಗ್ಗೆ  ಅಮೀರ್‌ ಖಾನ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ 22ರಿಂದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಕೋವಿಡ್‌ ಕಾರಣದಿಂದಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುತ್ತಿಲ್ಲ. 2022ರ ಫೆಬ್ರುವರಿ 14ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಅಮೀರ್‌ ಖಾನ್ ಬರೆದುಕೊಂಡಿದ್ದಾರೆ. 

ಲಾಲ್‌ ಸಿಂಗ್‌ ಚಡ್ಡಾ ಹಾಲಿವುಡ್‌ನ ‘ಫಾರೆಸ್ಟ್‌ ಗಂಪ್‌‘ ಚಿತ್ರದ ರಿಮೇಕ್‌ ಆಗಿದ್ದು, ಅಮೀರ್‌ ಅವರೊಂದಿಗೆ ಕರೀನಾ ಕಪೂರ್‌ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿವೆ.

ಚಿತ್ರವು ಮುಂದಿನ ವರ್ಷ ಫೆಬ್ರುವರಿ ತಿಂಗಳಲ್ಲಿ ತೆರೆಕಾಣಲಿರುವ ಈ ಸಿನಿಮಾವನ್ನು ಅದ್ವೈತ್‌ ಚಂದನ್‌ ನಿರ್ದೇಶನ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು