ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ನಟ ರಾಹುಲ್‌ ರಾಯ್‌ ಆಸ್ಪತ್ರೆಗೆ ದಾಖಲು

Last Updated 30 ನವೆಂಬರ್ 2020, 12:50 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ರಾಹುಲ್‌ ರಾಯ್‌ ಅವರನ್ನು ಮೆದುಳಿನ ಪಾರ್ಶ್ವವಾಯುವಿನ ಹಿನ್ನೆಲೆಯಲ್ಲಿ ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘52 ವರ್ಷ ವಯಸ್ಸಿನ ರಾಹುಲ್‌ ಅವರು ಚಲನಚಿತ್ರವೊಂದರ ಶೂಟಿಂಗ್‌ ನಿಮಿತ್ತ ಇತ್ತೀಚೆಗೆ ಕಾರ್ಗಿಲ್‌ಗೆ ಭೇಟಿ ನೀಡಿದ್ದರು. ಎರಡು ದಿನಗಳ ಹಿಂದೆ ಅಲ್ಲಿಂದ ಮರಳಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇಡಲಾಗಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ರಾಹುಲ್‌ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವೇ ಗುಣಮುಖರಾಗಲಿದ್ದಾರೆ’ ಎಂದೂ ಮೂಲಗಳು ಹೇಳಿವೆ.

1990ರಲ್ಲಿ ತೆರೆಕಂಡ ಆಶಿಕಿ ಚಿತ್ರದ ಮೂಲಕ ರಾಹುಲ್‌, ಬಾಲಿವುಡ್‌ಗೆ ಅಡಿ ಇಟ್ಟಿದ್ದರು. ಆಗ ಅವರಿಗೆ 22 ವರ್ಷ ವಯಸ್ಸು. ನಂತರ ‘ಜುನೂನ್‌’, ‘ಫಿರ್‌ ತೇರಿ ಕಹಾನಿ ಯಾದ್‌ ಆಯಿ’ ಸೇರಿದಂತೆ ಹಲವು ಚಿತ್ರಗಳಲ್ಲೂ ನಟಿಸಿದ್ದರು.

ಚೊಚ್ಚಲ ಆವೃತ್ತಿಯ (2006) ಬಿಗ್‌ ಬಾಷ್‌ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿದ್ದರು. 2017ರಲ್ಲಿ ಅವರು ಬಿಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT