ಭಾನುವಾರ, ಅಕ್ಟೋಬರ್ 24, 2021
21 °C

ಚಿತ್ರೀಕರಣ– ಕಾನೂನು ನೆರವಿಗೆ ಎಬಿಸಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆರೆ ರಾಜ್ಯ ಹಾಗೂ ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಬೇಕಾದ ಕಾನೂನು ನೆರವು, ಸ್ಥಳೀಯಾಡಳಿತದ ಪರವಾನಗಿ ಸಹಿತ ವಿವಿಧ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಿದೆ ಫ್ಯಾಷನ್‌ ಎಬಿಸಿಡಿ ಕಂಪನಿ.

ಫ್ಯಾಷನ್ ಎಬಿಸಿಡಿ ಮಂಗಳೂರು ಮೂಲದ ಸಂಸ್ಥೆ. ಚರಣ್ ಸುವರ್ಣ ಅದರ ಮಾಲೀಕರು. ಇದುವರೆಗೂ ಬಾಲಿವುಡ್ ಮಟ್ಟದಲ್ಲಿ, ಫ್ಯಾಷನ್ ಲೋಕದಲ್ಲಿ ಸಕ್ರಿಯರಾಗಿರುವವರು. ಈಗ ಚಿತ್ರರಂಗಕ್ಕೆ ಅನುಕೂಲವಾಗುವ ಯೋಜನೆಯನ್ನು ಹೊತ್ತು ತಂದಿದ್ದಾರೆ. ಈ ಸಂಸ್ಥೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ನೊವೆಲ್ ವರ್ಕ್ಸ್ ಎಂಬ ಮತ್ತೊಂದು ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.

ಕನ್ನಡ ಚಿತ್ರಗಳಿಗೆ ಹೊರರಾಜ್ಯ ಮತ್ತು ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಿ, ಸಬ್ಸಿಡಿಯನ್ನೂ ಕೊಡಿಸುವುದೂ ಈ ಸಂಸ್ಥೆಯ ಕಾರ್ಯಗಳಲ್ಲಿ ಒಂದು. ಕೆಲವು ದೇಶಗಳಲ್ಲಿ ಇಂಥ ಸಬ್ಸಿಡಿ ವ್ಯವಸ್ಥೆ ಇದೆ ಎಂದು ಇದೇ ಸಂಸ್ಥೆ ಹೇಳಿದೆ.

ಫ್ಯಾಷನ್ ಎಬಿಸಿಡಿ ಸಂಸ್ಥೆ ಮತ್ತು ನೊವೆಲ್ ವರ್ಕ್ಸ್ ವಿಶ್ವದ ಐವತ್ತಕ್ಕೂ ಹೆಚ್ಚು ದೇಶಗಳ ಸರ್ಕಾರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ.

ಶೀಘ್ರದಲ್ಲಿಯೇ ನೊವೆಲ್ ವರ್ಕ್ಸ್ ತಂಡವನ್ನು ಬೆಂಗಳೂರಿಗೆ ಕರೆಸಿ ಒಂದು ಕಾರ್ಯಕ್ರಮ ಆಯೋಜಿಸಿ ಕನ್ನಡ ನಿರ್ಮಾಪಕರನ್ನು ಮುಖಾಮುಖಿಯಾಗಿಸುವ ತಯಾರಿಯೂ ಶುರುವಾಗಿದೆ ಎಂದಿದ್ದಾರೆ ಚರಣ್‌ ಸುವರ್ಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು