ಬರುತ್ತಿದ್ದಾರೆ ಕಲಾಂ!

7

ಬರುತ್ತಿದ್ದಾರೆ ಕಲಾಂ!

Published:
Updated:

ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಕಲಾಂ ಬೆಳ್ಳಿತೆರೆಯ ಮೇಲೆ ಬರುವುದಕ್ಕೆ ಎಲ್ಲ ಹಾದಿಯೂ ಸುಗಮವಾಗಿದೆ. ಡಾ.ಅಬ್ದುಲ್‌ ಕಲಾಂ ಎಂಬ ಹೆಸರಿನ ಜೀವನಚರಿತ್ರೆ ಆಧರಿಸಿದ ಹೊಸ ಸಿನಿಮಾ, ಡಿಸೆಂಬರ್‌ ಮೊದಲ ವಾರ ತೆರೆಗೆ ಬರಲಿದೆ. ಬೋಮನ್‌ ಇರಾನಿ ಈ ಚಿತ್ರದಲ್ಲಿ ವಿಭಿನ್ನವಾಗಿ ಪಾತ್ರ ನಿರ್ವಹಿಸಿದ್ದಾರೆ.

ಮಿಸೈಲ್‌ ಮ್ಯಾನ್‌ ಎಂದೇ ಹೆಸರುವಾಸಿಯಾಗಿ ಕೊನೆಗೆ ಭಾರತದ ರಾಷ್ಟ್ರಪತಿ ಹುದ್ದೆಗೇರಿದ ಕಲಾಂ ಸಾಹೇಬರ ಕಥೆಯನ್ನು ನಿರ್ದೇಶಿಸಿದವರು ಅನಿಲ್‌ ಸುಂಕರ. ಕಲಾಂ ಅವರ ಬಾಲ್ಯದಿಂದ ಕಥೆ ಶುರುವಾಗಿ ಯಶಸ್ಸಿನ ತುತ್ತ ತುದಿಗೇರಿದ ಅಲ್ಲಿವರೆಗೆ ಇದೆಯಂತೆ. ಅದರಲ್ಲೂ ಪೋಖ್ರಾನ್‌ ಪರಮಾಣು ಪರೀಕ್ಷೆಯ ರಹಸ್ಯವನ್ನು ಕಲಾಂ ಕಾಪಾಡಿಕೊಂಡ ಬಗ್ಗೆ ಹೆಚ್ಚು ವಿವರಗಳಿವೆಯಂತೆ.

2012ರಲ್ಲಿ  ಐ ಆ್ಯಮ್‌ ಕಲಾಂ ಎನ್ನುವ ಮಕ್ಕಳ ಚಿತ್ರವೊಂದು ಬಂದಿತ್ತು. ಆ ಚಿತ್ರಕ್ಕೂ ಕಲಾಂ ಅವರ ಸಾಧನೆಯೇ ಸ್ಫೂರ್ತಿಯಾಗಿತ್ತು. ಈಗ ಜೀವನ ಚರಿತ್ರೆ ಆಧರಿಸಿದ ಸಾಹಸ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !