ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ದಾಂಪತ್ಯ ಜೀವನ ಕುರಿತು ಕೆಲವು ವರ್ಷಗಳ ಹಿಂದೆ ಸಾಕಷ್ಟು ಊಹಾಪೋಹಗಳು ಹರಡಿತ್ತು. ಅದರ ಮಧ್ಯೆಯೂ ಈ ಜೋಡಿ ಕೆಲದಿನಗಳ ಹಿಂದೆ 19ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದೆ.

ಅಭಿಷೇಕ್ ಮತ್ತು ಐಶ್ವರ್ಯಾ ಅವರು 2000ರಲ್ಲಿ ತೆರೆಕಂಡ ‘ಧೈ ಅಕ್ಷರ್ ಪ್ರೇಮ್ ಕೆ’ ಚಿತ್ರದ ಮೂಲಕ ಪರಿಚಯವಾದರು. ‘ಕುಚ್ ನಾ ಕಹೋ’ ಚಿತ್ರದಲ್ಲೂ ನಟಿಸಿದ್ದರು. 2007ರ ಏಪ್ರಿಲ್ 20 ರಂದು ಈ ಜೋಡಿ ಮುಂಬೈನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈ ಕುರಿತು ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯ ರೈ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ , ‘ಪತಿ ಅಭಿಷೇಕ್ ಬಚ್ಚನ್ ಹಾಗೂ ಪುತ್ರಿ ಆರಾಧ್ಯ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ಈ ಜೋಡಿಯ ವಿವಾಹ ವಾರ್ಷಿಕೋತ್ಸಕ್ಕೆ ಅನೇಕರು ಶುಭಕೋರಿದ್ದಾರೆ.

ಐಶ್ವರ್ಯ ರೈ ಬಗ್ಗೆ ಅಭಿಷೇಕ್ ಬಚ್ಚನ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ‘ಐಶ್ವರ್ಯಾ ಅವರು ನನ್ನ ಮಗಳ ತಾಯಿ ಮಾತ್ರವಲ್ಲ, ಅವರು ನನ್ನ ಜೀವದ ಗೆಳತಿ. ನಮ್ಮ ದಾಂಪತ್ಯ ಜೀವನಕ್ಕೆ 19 ವರ್ಷ ಎಂದರೆ ನಂಬಲು ಆಗುವುದಿಲ್ಲ. ಅದಾಗಿಯೂ, ನಮ್ಮ ಮುದ್ದಿನ ಮಗಳು ಆರಾಧ್ಯಳಿಗೆ ಉತ್ತಮ ಸಂಸ್ಕಾರಗಗಳನ್ನು ಕಲಿಸಿದ ಕೀರ್ತಿ ನನ್ನ ಪತ್ನಿಗೆ ಸಲ್ಲಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.