ಶನಿವಾರ, ಸೆಪ್ಟೆಂಬರ್ 26, 2020
22 °C

ವಿನಯ ಕುಲಕರ್ಣಿ ಫಾರ್ಮ್‌ನಲ್ಲಿ ಎತ್ತಿನ ಬಂಡಿ ಓಡಿಸಿ ಸಂಭ್ರಮಿಸಿದ ನಟ ದರ್ಶನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರ ವಿನಯ ಫಾರ್ಮ್‌ಗೆ ಬಂದಿರುವ ನಟ ದರ್ಶನ, ಎತ್ತಿನ ಬಂಡಿ ಓಡಿಸಿ ಸಂಭ್ರಮಿಸಿದರು.

ವಿನಯ ಕುಲಕರ್ಣಿ ಅವರ ಡೇರಿಯಲ್ಲಿರುವ ಅವರ ನೆಚ್ಚಿನ ಎತ್ತುಗಳನ್ನು ಬಂಡಿಕಟ್ಟಿ ವಿನಯ ಫಾರ್ಮ್ ಸುತ್ತ ಓಡಾಡಿಸಿದರು. ಫಾರ್ಮ್‌ನಲ್ಲಿರುವ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದಿರು ದರ್ಶನ್, ಆಕಳು ಹಾಗೂ ಎಮ್ಮೆಗಾಗಿ ಇರುವ ಪ್ರತ್ಯೇಕ ಡೇರಿಯಲ್ಲಿ ಓಡಾಡಿ ಅಳವಡಿಸಿರುವ ತಂತ್ರಜ್ಞಾನ ಕುರಿತು ವಿನಯ ಕುಲಕರ್ಣಿ ಅವರಿಂದ ಮಾಹಿತಿ ಪಡೆದರು.

ಮಧ್ಯಾಹ್ನ ಉತ್ತರ ಕರ್ನಾಟಕ ಜೋಳದ ರೊಟ್ಟಿ, ಕಾಳು ಪಲ್ಯ, ಗಟ್ಟಿ ಮೊಸರು ಊಟ ಸವಿದರು. ವಿನಯ ಫಾರ್ಮ್‌ಗೆ ಸೇರಿದವರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು