ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ದಿಲೀಪ್ ರಾಜ್ ಅವರು ನಿನ್ನೆ (ಮೇ 12 ) ಹೃದಯಘಾತದಿಂದ ಮೃತಪಟ್ಟಿದ್ದಾರೆ. ಈಗ ಅವರ ಪತ್ನಿ ಶ್ರೀವಿದ್ಯಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ‘ಜೀವನದ ಕಹಿ ಘಟನೆ ಸಂದರ್ಭದಲ್ಲಿ ನನ್ನ ಜೊತೆ ನಿಂತಿರುವ ಪ್ರತಿಯೊಬ್ಬರಿಗೂ ಕೃತಜ್ಞನೆ ತಿಳಿಸುತ್ತೇನೆ. ಕಲೆ, ಸಿನಿಮಾ, ನಟನೆಯಲ್ಲಿ ನನ್ನ ಪತಿ ದಿಲೀಪ್ ಯಾವಾಗಲೂ ನಮ್ಮ ಜೊತೆ ಇರುತ್ತಾರೆ. ಇನ್ಮುಂದೆ ನಾವು ಮಾಡುವ ಕೆಲಸದಲ್ಲಿ ದಿಲೀಪ್ ಅವರನ್ನು ನೋಡಲು ಬಯಸುತ್ತೇನೆ. ಅವರು ಶಾಂತಿಯಿಂದ ಇರಲು ಬಿಟ್ಟು ಬಿಡಬೇಕು ಎಂದು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯವನ್ನು ಖಚಿತಪಡಿಸಲು ಇಷ್ಟಪಡುತ್ತೇನೆ. ಅವರನ್ನು ಮತ್ತೆ ನೋಡುವ ತನಕ ನನ್ನ ಆತ್ಮಕ್ಕೂ ಶಾಂತಿ ಸಿಗುವುದಿಲ್ಲʼ ಎಂದು ಬರೆದುಕೊಂಡಿದ್ದಾರೆ.

ದಿಲೀಪ್ ಅವರು ಪತ್ನಿ ಶ್ರೀವಿದ್ಯಾ ಜೊತೆ ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಹಿಟ್ಲರ್ ಕಲ್ಯಾಣ’, ‘ಪಾರು’, ‘ವಿದ್ಯಾ ವಿನಾಯಕ’, ‘ವಧು’, ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶನ ಮಾಡಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.