ಶನಿವಾರ, ಫೆಬ್ರವರಿ 4, 2023
28 °C

ಅನುಷಾ ಶೆಟ್ಟಿಯನ್ನು ವರಿಸಿದ ತೆಲುಗು ನಟ ನಾಗ ಶೌರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗು ಯುವ ನಟ ನಾಗ ಶೌರ್ಯ ಅವರು ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರನ್ನು ವರಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಅದ್ಧೂರಿ ವಿವಾಹ ನಡೆದಿದೆ. 19 ರಂದು ನಿಶ್ಚಿತಾರ್ಥ ನೆರವೇರಿದೆ.

ಇಂಟಿರಿಯರ್ ಫ್ಯಾಶನ್ ಡಿಸೈನರ್ ಆಗಿರುವ ಅನುಷಾ ಅವರು ಉದ್ಯಮಿ ಕೂಡ ಆಗಿದ್ದಾರೆ. ನಾಗಶೌರ್ಯ ಹಾಗೂ ಅನುಷಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು.

ಎರಡೂ ಕುಟುಂಬಗಳ ಸಮಕ್ಷಮದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿದೆ. ದಾಂಪತ್ಯಕ್ಕೆ ಕಾಲಿರಿಸಿರುವ ನಾಗೌಶೌರ್ಯ ದಂಪತಿಗೆ ಚಿತ್ರರಂಗದ ಅನೇಕರು ಶುಭ ಕೋರಿದ್ದಾರೆ.

ತೆಲುಗಿನಲ್ಲಿ 'ಓ ಬೇಬಿ' ಸೇರಿದಂತೆ 24 ಸಿನಿಮಾಗಳಲ್ಲಿ ನಾಗಶೌರ್ಯ ನಾಯಕ ನಟನಾಗಿ ಅಭಿನಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು