ಬೆಂಗಳೂರು: ಬಾಲಿವುಡ್ ನಟ ಪರ್ವೀನ್ ದಬಾಸ್ ಅವರು ಶನಿವಾರ ಬೆಳಿಗ್ಗೆ ಮುಂಬೈನಲ್ಲಿ ನಡೆದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸದ್ಯ ಅವರನ್ನು ಬಾಂದ್ರಾದ ಹೋಲಿ ಲೈಫ್ ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.
ಕಾರು ಅಪಘಾತದಲ್ಲಿ ಪರ್ವೀನ್ ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಅವರ ಪತ್ನಿ ನಟಿ ಪ್ರೀತಿ ಜಂಗೈನಿ ತಿಳಿಸಿದ್ದಾರೆ.
ದಿಲ್ಲಗಿ, ಖೊಸ್ಲಾಕಾ ಗೋಸ್ಲಾ, ಮೈ ನೇಮ್ ಇಸ್ ಖಾನ್, ರಾಗಿಣಿ ಎಂಎಂಎಸ್ 2 ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ಪರ್ವೀನ್ ನಟಿಸಿದ್ದಾರೆ. ದೆಹಲಿ ಮೂಲದ ಅವರು ಪ್ರೊ ಪಂಜಾ ಎಂಬ ಕುಸ್ತಿ ಲಿಗ್ ಸಂಸ್ಥಾಪಕರು ಹೌದು.