ಬೆಂಗಳೂರು: ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಸೋತರೆ ನೂರು ಜನರ ಅಭಿವದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಹರಕೆ ಹೊತ್ತಿರುವುದಾಗಿ ನಟ ಪ್ರಥಮ್ ಹೇಳಿದ್ದಾರೆ.

ಇಂದು(ಸೋಮವಾರ) ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಟಿಎಂಸಿ ಭಾರಿ ಹಿನ್ನಡೆ ಅನುಭವಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಪ್ರಥಮ್ ಪೋಸ್ಟ್ ಹಂಚಿಕೊಂಡಿದ್ದಾರೆ.

‘ನನಗೆ ಇಂತಹ ಮಕ್ಕಳಾಗಬೇಕು, ನನ್ನ ಸಿನಿಮಾ ಗೆಲ್ಲಬೇಕು ಅಂತ ಯಾವತ್ತು ಹರಕೆ ಹೊತ್ತವನಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಏನಾದರೂ ಮಮತಾ ಬ್ಯಾನರ್ಜಿ ಪಕ್ಷ ಸೋತರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ. ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ಲುತ್ತೇನೆ ಅಂತ ಈಶ್ವರನಲ್ಲಿ ಪ್ರಾರ್ಥಿಸುವೆ’ ಎಂದು ಹೇಳಿದ್ದಾರೆ.

‘ನಾನು ರಾಜಕೀಯದಿಂದ ದೂರವಿದ್ದೇನೆ. ಆದರೆ, ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತರಾಗಬೇಕು. ನನ್ನ ದೇಶ ಚೆನ್ನಾಗಿರಬೇಕು. ಇದೊಂದೇ ಈಶ್ವರನಲ್ಲಿ ಬೇಡಿಕೆ’ ಎಂದು ಹೇಳಿದ್ದಾರೆ.

‘ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಸೋಲಲಿ..! ನಮ್ಮವರು ಚೆನ್ನಾಗಿರಲಿ. ಖಂಡಿತಾ ಕಷ್ಟದಲ್ಲಿದ್ದವರ ಶಕ್ತಿ ಮೀರಿ ಸಹಾಯ ಮಾಡುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.