ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೇಮ್ಸ್‌’ ಟೀಸರ್‌ ಬಿಡುಗಡೆ: ‘ಅಪ್ಪು’ ಅಭಿಮಾನಿಗಳಲ್ಲಿ ಸಡಗರ

ಮಾ.17ಕ್ಕೆ ಸಿನಿಮಾ ಬಿಡುಗಡೆ
Last Updated 11 ಫೆಬ್ರುವರಿ 2022, 9:02 IST
ಅಕ್ಷರ ಗಾತ್ರ

ಚೇತನ್‌ ಕುಮಾರ್‌ ನಿರ್ದೇಶನದ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಜೇಮ್ಸ್‌’ನ ಟೀಸರ್‌ ಬಿಡುಗಡೆಯಾಗಿದ್ದು, ನೆಚ್ಚಿನ ‘ಅಪ್ಪು’ವಿನ ಆ್ಯಕ್ಷನ್ ದೃಶ್ಯಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾ ಪುನೀತ್‌ ರಾಜ್‌ಕುಮಾರ್‌ ಜನ್ಮದಿನದಂದೇ(ಮಾ.17)ತೆರೆಕಾಣಲಿದೆ. ಈ ಕುರಿತು ಅಧಿಕೃತವಾಗಿ ಟೀಸರ್‌ನಲ್ಲೇ ಚಿತ್ರತಂಡವು ಘೋಷಿಸಿದೆ.

‘ಉದ್ಯಮಕ್ಕಿಂತ ಭಾವನೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ–ಜೇಮ್ಸ್‌’ ಎನ್ನುವ ಬರಹದೊಂದಿಗೆ ಟೀಸರ್‌ ಆರಂಭವಾಗಿದ್ದು, ಮಾಫಿಯಾ ಕಥೆಯನ್ನು ಚಿತ್ರವು ಹೊಂದಿದೆ. ಜೆ–ವಿಂಗ್‌ ಎಂಬ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾತ್ರದಲ್ಲಿ ಪವರ್‌ಸ್ಟಾರ್‌ ಪುನೀತ್‌ ಅವರು ಪವರ್‌ಫುಲ್‌ ಆಗಿ ಕಾಣಿಸಿಕೊಂಡಿದ್ದು, ಟೀಸರ್‌ನಲ್ಲಿ ಆ್ಯಕ್ಷನ್‌ ದೃಶ್ಯಗಳೇ ತುಂಬಿವೆ. ಚಿತ್ರದ ಡಬ್ಬಿಂಗ್‌ ಪೂರ್ಣಗೊಳ್ಳುವ ಮೊದಲೇ ಪುನೀತ್‌ ಅವರು ನಿಧನರಾದ ಕಾರಣ, ಪುನೀತ್‌ ಅವರ ಪಾತ್ರಕ್ಕೆ ನಟ ಶಿವರಾಜ್‌ಕುಮಾರ್‌ ಅವರು ಧ್ವನಿ ನೀಡಿದ್ದಾರೆ. ಟೀಸರ್‌ ಕೊನೆಯಲ್ಲಿ ‘ನನಗೆ ಮೊದಲಿನಿಂದಲೂ ರೆಕಾರ್ಡ್‌ ಬ್ರೇಕ್‌ ಮಾಡಿ ಅಭ್ಯಾಸ’ ಎನ್ನುವ ಧ್ವನಿಯ ಮೂಲಕ ಪುನೀತ್‌ ಪಾತ್ರಕ್ಕೆ ಶಿವರಾಜ್‌ಕುಮಾರ್‌ ಜೀವತುಂಬಿದ್ದಾರೆ.

ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಚಿತ್ರವು ತೆರೆಕಾಣಲಿದೆ. ಜೇಮ್ಸ್‌ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ‘ಜೇಮ್ಸ್‌’ ಮೂಲಕ ಈಡೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT