ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳು ನಟ ರಜನಿಕಾಂತ್‌ ಆರೋಗ್ಯ ಸ್ಥಿತಿ ಸ್ಥಿರ

Published : 1 ಅಕ್ಟೋಬರ್ 2024, 13:08 IST
Last Updated : 1 ಅಕ್ಟೋಬರ್ 2024, 13:08 IST
ಫಾಲೋ ಮಾಡಿ
Comments

ಚೆನ್ನೈ: ತಮಿಳು ನಟ ರಜನಿಕಾಂತ್‌ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇನ್ನೆರಡು ದಿನಗಳಲ್ಲಿ ಮನೆಗೆ ವಾಪಸ್ ಆಗಲಿದ್ದಾರೆ ಎಂದು ಅಪೋಲೊ ಆಸ್ಪತ್ರೆ ತಿಳಿಸಿದೆ.

ರಜನಿಕಾಂತ್‌ ಅವರ ಆರೋಗ್ಯದಲ್ಲಿ ಏರುಪೇರಾದ್ದರಿಂದ ಸೋಮವಾರ ತಡರಾತ್ರಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.

ಹೃದಯದ ಮುಖ್ಯ ರಕ್ತನಾಳದಲ್ಲಿ ಊತ ಕಂಡು ಬಂದಿದ್ದರಿಂದ ಟ್ರಾನ್ಸ್‌ಕ್ಯಾಥೆಟರ್ ಚಿಕಿತ್ಸಾ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ

ರಜನಿಕಾಂತ್‌ ಅವರ ಹಿತೈಷಿಗಳು, ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ಅವರು ಆರೋಗ್ಯವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT