ಶುಕ್ರವಾರ, ಮಾರ್ಚ್ 31, 2023
33 °C

ನಟ ರಿಷಬ್‌ ಶೆಟ್ಟಿ: ಎಐ ಅವತಾರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಿಷಬ್‌ ಶೆಟ್ಟಿ ತಮ್ಮ ಮುಂದಿನ ಸಿನಿಮಾದಲ್ಲಿ ಪುರಾಣದ ಕಥೆಯೊಂದರ ಯೋಧನಾದರೆ, ಇಲ್ಲವೇ ರಾಜನಾದರೆ ಅಥವಾ ಕಾಲ್ಪನಿಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿದರೆ ಹೇಗಿರುತ್ತಾರೆ? ಇಂಥ ಕಲ್ಪನೆಯೊಂದನ್ನು ಸ್ವತಃ ರಿಷಬ್‌ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. 

ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿರುವ ಎಐ(ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌–ಕೃತಕ ಬುದ್ಧಿಮತ್ತೆ) ಇಮೇಜ್‌ಗಳಲ್ಲಿ ನಟ ರಿಷಬ್‌ ಶೆಟ್ಟಿ ಹಾಗೂ ನಟಿ ಆಶಿಕಾ ರಂಗನಾಥ್‌ ಮಿಂಚುತ್ತಿದ್ದಾರೆ. ತಾವು ವಿಭಿನ್ನ ಪಾತ್ರಗಳಲ್ಲಿ ಹೀಗೆ ಕಾಣಿಸಿಕೊಳ್ಳಬಹುದು ಎನ್ನುತ್ತಾ ತಮ್ಮ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ‘ತಂತ್ರಜ್ಞಾನ ಎನ್ನುವುದು ನನ್ನ ಪ್ರಚಂಡ ಕನಸುಗಳಿಗೆ ಜೀವತುಂಬಲಿದೆ ಎನ್ನುವುದು ಯಾರಿಗೆ ತಿಳಿದಿತ್ತು?’ ಎನ್ನುತ್ತಾ ಕೆಆರ್‌ಜಿ ಸಂಸ್ಥೆಯು ಸಿದ್ಧಪಡಿಸಿದ ತಮ್ಮ ಎಐ ಇಮೇಜ್‌ಗಳನ್ನು ಅಪ್‌ಲೋಡ್‌ ಮಾಡಿ ರಿಷಬ್‌ ಶೆಟ್ಟಿ ಆಶ್ಚರ್ಯಪಟ್ಟಿದ್ದಾರೆ. ಈ ಫೋಟೊಗಳಿಗೆ ಪ್ರತಿಕ್ರಿಯೆ ನೀಡಿರುವ ಹಲವರು, ಪೌರಾಣಿಕ ಕಥೆ ಹೊಂದಿರುವ ಸಿನಿಮಾವೊಂದನ್ನು ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಆರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೇ ಮಾದರಿಯಲ್ಲಿ ನಟಿಯರಾದ ರಮ್ಯಾ, ಸೌಂದರ್ಯ, ರಕ್ಷಿತಾ ಪ್ರೇಮ್‌, ನಟರಾದ ಪ್ರಜ್ವಲ್‌ ದೇವರಾಜ್‌, ಉಪೇಂದ್ರ, ಜಗ್ಗೇಶ್‌ ಅವರ ಎಐ ಇಮೇಜ್‌ಗಳನ್ನೂ ಕೆಆರ್‌ಜಿ ಸಿದ್ಧಪಡಿಸಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು