ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ನಾಡಿಗೆ ಮರಳುವ ಖುಷಿಯಲ್ಲಿ ರಿಷಿ ಕಪೂರ್‌

Last Updated 4 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹಲವು ತಿಂಗಳುಗಳಿಂದ ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರಿಷಿ ಕಪೂರ್‌ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ.

ಎಲ್ಲರ ಜೀವನದಲ್ಲೂ ಒಳ್ಳೆಯ ಹಾಗೂ ಕೆಟ್ಟ ದಿನಗಳು ಇರುತ್ತವೆ. ಕೆಟ್ಟ ದಿನಗಳು ನಿಜಕ್ಕೂ ನಮ್ಮನ್ನು ಪರೀಕ್ಷಿಸುತ್ತವೆ.ಧೃತಿಗೆಡದೆ ಜೀವನದ ಕಠಿಣ ಸಮಯವನ್ನು ಎದುರಿಸುವುದನ್ನು ಕಲಿಯಬೇಕು. ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ರಿಷಿ ಪತ್ನಿ ನೀತೂ ಸಿಂಗ್‌ ಹೇಳಿದ್ದಾರೆ. ಜೀವನದ ಕೆಟ್ಟ ಗಳಿಗೆಗಳನ್ನು ತಮ್ಮ ಕುಟುಂಬ ಹೇಗೆ ಎದುರಿಸಿ ನಿಂತಿತು ಎಂದು ಅವರು ಹೇಳಿಕೊಂಡಿದ್ದಾರೆ.

‘ನನಗೆ ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಸಮಸ್ಯೆ ಇತ್ತು. ಅದು ಅಂತಹ ಗಂಭೀರವಾದ ಕಾಯಿಲೆ ಏನಲ್ಲ. ಹಾಗಂತ ಕಡೆಗಣಿಸುವಂತೆಯೂ ಇರಲಿಲ್ಲ. ಚಿಕಿತ್ಸೆ ನಂತರ ಗುಣಮುಖನಾಗಿದ್ದೇನೆ. ಈಗ ಎಲ್ಲವೂ ಸರಿಯಾಗಿದೆ’ ಎಂದು ರಿಷಿ ಸಂತಸವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ ಎಂದರೆ ಭಯಬೀಳುವವರೆ ಹೆಚ್ಚು. ಅದಕ್ಕೂ ಸರಿಯಾದ ಚಿಕಿತ್ಸೆ ಇದೆ ಎಂದು ಅವರು ಸಲಹೆ ನೀಡಿದ್ದಾರೆ.

ನ್ಯೂಯಾರ್ಕ್‌ನಲ್ಲಿಯೇ ಅನುಪಮ್‌ ಖೇರ್ ಅವರ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದ್ದರು. ಖೇರ್‌ ಆ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ರಿಷಿ ಕಪೂರ್‌ ಮೊದಲಿನಂತೆಯೇ ಲವಲವಿಕೆಯಿಂದ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT