ಗುರುವಾರ , ಜೂನ್ 17, 2021
21 °C

ಮುಂಬೈ: ಆಸ್ಪತ್ರೆಯಿಂದ ಮನೆಗೆ ಮರಳಿದ ನಟ ಸಂಜಯ್‌ ದತ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಮನೆಗೆ ಮರಳುವಾಗ ನಟ ಸಂಜಯ್‌ ದತ್‌

ಮುಂಬೈ: ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಸಂಜಯ್‌ ದತ್ (61) ಸೋಮವಾರ ಮನೆಗೆ ಮರಳಿದ್ದಾರೆ. ಆಗಸ್ಟ್‌ 8ರಂದು ಅವರು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು.

ಶನಿವಾರವೇ ಸಂಜಯ್‌ ದತ್‌ ಅವರಿಗೆ ಕೋವಿಡ್‌–19 ಪರೀಕ್ಷೆ ಸಹ ನಡೆಸಲಾಗಿತ್ತು. ವರದಿಯಲ್ಲಿ ನೆಗೆಟಿವ್‌ ಬಂದಿತ್ತು. ಆದರೂ, ಕೆಲವು ವೈದ್ಯಕೀಯ ತಪಾಸಣೆಗಳಿಗಾಗಿ ವೈದ್ಯರ ಸಲಹೆಯಂತೆ ಅವರು ಆಸ್ಪತ್ರೆಯಲ್ಲಿಯೇ ಉಳಿದಿದ್ದರು.

ಉಸಿರಾಟದಲ್ಲಿ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಾದ ದಿನವೇ ಟ್ವಿಟರ್‌ನಲ್ಲಿ ಸಂಜಯ್‌ ದತ್‌ ವಿಷಯ ತಿಳಿಸಿ,  ಎರಡು–ಮೂರು ದಿನಗಳಲ್ಲಿ ಮನೆಗೆ ಮರಳುವ ಭರವಸೆ ವ್ಯಕ್ತಪಡಿಸಿದ್ದರು.

ಪ್ರಶಾಂತ್‌ ನೀಲ್‌ ನಿರ್ದೇಶನದ 'ಕೆಜಿಎಫ್‌ ಚಾಪ್ಟರ್‌ 2' ಚಿತ್ರದಲ್ಲಿ ಸಂಜಯ್ ದತ್‌ 'ಅಧೀರ'ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸಂಜಯ್‌ ದತ್‌ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ನಟರಾದ ಸುನಿಲ್‌ ದತ್‌ ಮತ್ತು ನರ್ಗಿಸ್‌ ಅವರ ಹಿರಿಯ ಮಗ ಸಂಜಯ್. ಅವರಿಗೆ ಇಬ್ಬರು ಸೋದರಿಯರು ಪ್ರಿಯಾ ದತ್‌ ಮತ್ತು ನಮ್ರತಾ ದತ್. ಸಂಜಯ್‌ ಮೊದಲ ಪತ್ನಿ ರಿಚಾ ಶರ್ಮಾ ಅವರ ಮಗಳು ತ್ರಿಶಾಲಾ ದತ್‌ ಹಾಗೂ ಎರಡನೇ ಪತ್ನಿ ಮಾನ್ಯತಾ ದತ್‌ಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ರಿಚಾ ಶರ್ಮಾ 1996ರಲ್ಲಿ ಮಿದುಳು ಕ್ಯಾನ್ಸರ್‌ನಿಂದ ಸಾವಿಗೀಡಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು