ಬುಧವಾರ, ಡಿಸೆಂಬರ್ 8, 2021
25 °C
ಯುವತಿ ಮೇಲೆ ಅತ್ಯಾಚಾರ, ಹಲ್ಲೆ, ವಂಚನೆ ಆರೋಪ

ಅತ್ಯಾಚಾರ ಆರೋಪ: ಮೈಸೂರಿನಲ್ಲಿ ನಟ ಶೇಷಗಿರಿ ಬಸವರಾಜ್‌ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಾಚಾರ, ಹಲ್ಲೆ ಮತ್ತು ವಂಚನೆ ಆರೋಪ ಸಂಬಂಧ ನಟ ಶೇಷಗಿರಿ ಬಸವರಾಜ್‌ ಅವರನ್ನು ಮೈಸೂರಿನಲ್ಲಿ ಬಂಧಿಸಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

'ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುವುದಾಗಿ ತನ್ನಿಂದ ಹಣ ಪಡೆದು ವಂಚಿಸಿರುವ ಶೇಷಗಿರಿ, ಅತ್ಯಾಚಾರವನ್ನೂ ಎಸಗಿದ್ದಾರೆ. ಹಲ್ಲೆ ಕೂಡ ನಡೆಸಿದ್ದಾರೆ' ಎಂದು ಯುವತಿಯೊಬ್ಬರು ಹೋದ ತಿಂಗಳು ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಯು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ. ಕೆಲಸ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದುಕೊಂಡಿದ್ದ. ಹಣ ಹಿಂತಿರುಗಿಸುವಂತೆ ಯುವತಿ ಕೇಳಿದಾಗ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ದೂರವಾಣಿ ಕರೆಗಳ ಮಾಹಿತಿಯನ್ನು ಆಧರಿಸಿ ಆತನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯು ಬ್ಯಾಂಕ್‌ವೊಂದರಲ್ಲಿ ಉದ್ಯೋಗ ಮಾಡುತ್ತಿದ್ದ. ನಟನಾಗಬೇಕೆಂಬ ಆಸೆಯಿಂದ ಮೂರು ವರ್ಷಗಳ ಹಿಂದೆ ಕೆಲಸ ತೊರೆದಿದ್ದ. ಕನ್ನಡದ ಡಾರ್ಕ್‌, ಸಸ್ಪೆನ್ಸ್‌, ಕಿಲಾಡಿಗಳು ಹಾಗೂ ಆಶಿಕಿ–3 ಚಿತ್ರಗಳಲ್ಲಿ ಖಳ ಹಾಗೂ ಪೋಷಕ ನಟನಾಗಿ ಕೆಲಸ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಈತನಿಂದ ಮತ್ತಷ್ಟು ಯುವತಿಯರು ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ. ತನಿಖೆ ಮುಂದುವರಿಸಲಾಗಿದ್ದು, ಆರೋಪಿಯಿಂದ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು