ಬುಧವಾರ, ಸೆಪ್ಟೆಂಬರ್ 18, 2019
28 °C

ರವಿಚಂದ್ರನ್‌ ಜೊತೆಗೆ ನಟಿಸುವುದೇ ನನ್ನ ಅದೃಷ್ಟ: ನಟ ಸುದೀಪ್

Published:
Updated:
Prajavani

‘ಒಂದು ಕಾಲದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಸಿನಿಮಾದಲ್ಲಿ ನಟಿಸಲು ನಾನು ಸೇರಿದಂತೆ ಕನ್ನಡದ ಹಲವು ನಟರು ಸರದಿ ಸಾಲಿನಲ್ಲಿ ಕಾಯುತ್ತಿದ್ದೆವು. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ’ ಎಂದು ನಟ ಸುದೀಪ್ ಹೇಳಿದ್ದಾರೆ.

ರವಿಚಂದ್ರನ್‌ ನಿರ್ದೇಶನದ ‘ರವಿ ಬೋಪಣ್ಣ’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಚಿತ್ರದಲ್ಲಿ ಸುದೀಪ್ ಅವರದು ವಕೀಲನ ಪಾತ್ರ. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಬಳಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಕಿಚ್ಚ, ರವಿಚಂದ್ರನ್‌ ಜೊತೆಗಿನ ಅನುಭವಗಳನ್ನು ಮೆಲುಕು ಹಾಕಿದರು.

‘ರವಿಚಂದ್ರನ್‌ ನಿರ್ದೇಶನದ ಅಪೂರ್ವ ಚಿತ್ರದಲ್ಲೂ ನಟಿಸಿದ್ದೆ. ಅವರು ನಿರ್ದೇಶಿಸುತ್ತರುವ ಈ ಚಿತ್ರದಲ್ಲೂ ನಟಿಸುತ್ತಿರುವುದು ನನ್ನ ಅದೃಷ್ಟ. ಅವರ ಇಬ್ಬರು ಪುತ್ರರಿಗೂ ಇಂತಹ ಅವಕಾಶ ಲಭಿಸಿಲ್ಲ. ನನ್ನ ಪಾತ್ರ ಚಿಕ್ಕದೋ ಅಥವಾ ದೊಡ್ಡದೋ ಎನ್ನುವುದು ಮುಖ್ಯವಲ್ಲ. ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನುವುದಷ್ಟೇ ಮುಖ್ಯ’ ಎಂದು ವಿವರಿಸಿದರು.

‘ರವಿ ಬೋಪಣ್ಣ’ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ಅವರು ಕೇಳಿದ ತಕ್ಷಣವೇ ನಾನು ಒಪ್ಪಿಕೊಂಡೆ’ ಎಂದು ತಿಳಿಸಿದರು.

ರವಿಚಂದ್ರನ್‌ ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಶೆಟ್ಟಿ ಇದರ ನಾಯಕಿ. ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆಯುತ್ತಿದೆ.

Post Comments (+)