ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೋಲ್‌ ಆಯ್ತು ನಟಿ ಅನುಷ್ಕಾ ಶರ್ಮಾ ಬಿಕಿನಿ ಫೋಟೊ

Last Updated 21 ಆಗಸ್ಟ್ 2019, 7:51 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಿಕಿನಿ ತೊಟ್ಟು ಕೆರೆಬಿಯನ್ ದ್ವೀಪದ ಸಮುದ್ರ ತಟದಲ್ಲಿ ನಗೆ ಬೀರುತ್ತಾ ಕುಳಿತ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದೆ.

ಇದೀಗ ಬಿಕಿನಿ ಫೋಟೊವನ್ನು ನೆಟ್ಟಿಗರು, ಸುರಕ್ಷತಾ ದೃಷ್ಟಿಯಿಂದ ರಸ್ತೆಯಲ್ಲಿಡುವ ಕೇಸರಿ ಬಣ್ಣದ ಡಿವೈಡರ್‌ಗೆ ಹೋಲಿಸಿದ್ದು, ಹಲವು ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಧರಿಸಿದ ಬಟ್ಟೆ ಮೇಲೆ ಕುಳಿತಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಫೋಟೊ ತೆಗೆಯುತ್ತಿರುವಂತೆ...ಹೀಗೆ ‘ಎಲ್ಲೆಡೆ ಅನುಷ್ಕಾ’ ಎಂಬ ಅಡಿಬರಹದೊಂದಿಗೆ ಟ್ರೋಲ್‌ಗೆ ಆಹಾರವಾಗಿದ್ದಾರೆ.

ಅನುಷ್ಕಾ ಎರಡು ದಿನಗಳ ಹಿಂದೆ ಕೇಸರಿ, ಬಿಳಿ, ಗುಲಾಬಿ ಮಿಶ್ರಿತ ಬಿಕಿನಿ ಹಾಕಿದ ಫೋಟೊವನ್ನು ‘ಸೂರ್ಯನ ಚುಂಬನ ಮತ್ತು ಆಶೀರ್ವಾದ’ಎಂಬ ಅಡಿಬರಹದಡಿಯಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಇದನ್ನು 24,19,847 ಮಂದಿ ಇಷ್ಟಪಟ್ಟಿದ್ದಾರೆ. ಇದಕ್ಕೆ ಪತಿ ವಿರಾಟ್‌ ಕೊಹ್ಲಿ ಕೂಡ ಹಾರ್ಟ್‌ ಮತ್ತು ಕಿಸ್‌ ಇಮೋಜಿ ಹಾಕುವುದರ ಮೂಲಕ ಮೆಚ್ಚುಗೆ ಸೂಚಿಸಿದ್ದರು.

Sun kissed & blessed 🧡⛱️

A post shared by AnushkaSharma1588 (@anushkasharma) on

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT