'ಸೇಕ್ರೆಡ್ ಗೇಮ್ಸ್' ಚಿತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದ ನಟಿ ರಾಜಶ್ರೀ ದೇಶಪಾಂಡೆ ಅವರು ತಮಗಿರುವ ಸ್ತನ ಕ್ಯಾನ್ಸರ್ ಕುರಿತು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ʼ2026ರ ಮಾರ್ಚ್ನಲ್ಲಿ ನನಗೆ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು. ನಾನು ಕೆಲವು ದಿನಗಳಿಂದ ಕಣ್ಣಿಗೆ ಕಾಣದ ಶಕ್ತಿ ಜೊತೆ ಹೋರಾಡುತ್ತಿದ್ದೇನೆ. ಸುಖಕರ ಜೀವನಕ್ಕಾಗಿ ಹೋರಾಡುವುದು ಅನಿವಾರ್ಯʼ ಎಂದು ಎನ್ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಅವರು, ʼಜನರು ಕ್ಯಾನ್ಸರ್ ಅನ್ನು ಭಿನ್ನ ರೀತಿಯಲ್ಲಿ ಬಿಂಬಿಸುತ್ತಾರೆ. ಈ ಕಾಯಿಲೆಯಿಂದ ಬಳಲುವವರ ಬಗ್ಗೆ ಚರ್ಚಿಸದೆ ನಿಮ್ಮ ಜೀವನವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿ. ಅವರಿವರ ಬಗ್ಗೆ ಅವಲೋಕಿಸುವುದಕ್ಕಿಂತ ನಿಮ್ಮಲಿರುವ ಸಮಸ್ಯೆ ಬಗ್ಗೆ ಮೊದಲು ತಿಳಿದುಕೊಳ್ಳಿ. ಆಗ ನಿಮ್ಮ ಜೀವನವೂ ಸುಂದರವಾಗಿರುತ್ತದೆ. ಇದರ ನಡುವೆ ದೈನಂದಿನ ಒತ್ತಡಗಳಿಗೆ ಸಿಲುಕಿ ನಮ್ಮ ಜೀವನಕ್ಕೆ ಬೇಕಾದ ಮುಖ್ಯ ಸಂಗತಿಗಳನ್ನೇ ಮರೆತು ಬಿಡುತ್ತೇವೆʼ ಎಂದು ಹೇಳಿದ್ದಾರೆ.

ʼನೀವು ಅಂದುಕೊಂಡಂತೆ ಮಹಿಳೆಯರ ಜೀವನ ಸುಲಭವಾಗಿರುವುದಿಲ್ಲ. 35-40 ವರ್ಷದ ನಂತರ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದ ದೊಡ್ಡ ಮಟ್ಟದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಮಯದಲ್ಲಿ ಕ್ಯಾನ್ಸರ್ನಂತಹ ರೋಗ ಪತ್ತೆಯಾದರೆ ಆ ಮಹಿಳೆ ಇನ್ನಷ್ಟು ಕುಗ್ಗುತ್ತಾಳೆ. ಮಹಿಳೆಯರ ಬಗ್ಗೆ ಮಾತನಾಡುವ ಮೊದಲು ಅವಳ ಸಮಸ್ಯೆಗಳ ಬಗ್ಗೆ ಯೋಚಿಸಿಬೇಕುʼ ಎಂದಿದ್ದಾರೆ.

ʼನಾನು ಬಾಲ್ಯದಲ್ಲಿ ಭೂತಗಳಿಗೆ ಹೆದರುವಾಗ ನಮ್ಮ ತಂದೆ ʼಕೆಟ್ಟ ಜನರೇ ಭೂತಗಳು ಎಂದು ಪರಿಚಯಿಸಿದ್ದರು. ಇತ್ತೀಚಿಗೆ ವೈದ್ಯರು ನಕಾರಾತ್ಮಕತೆಯಿಂದ ದೂರ ಉಳಿಯಿರಿ ಎಂದು ಸಲಹೆ ನೀಡಿದ್ದರು. ಕೇವಲ ಔಷಧಿ ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಜನರಿಂದಲೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾನು ಕೆಲವು ದಿನಗಳಿಂದ ಕೆಟ್ಟ ಮನಸ್ಥಿತಿಯ ಜನರನ್ನು ದೂರ ಇಡಲು ಇಚ್ಛಿಸುತ್ತೇನೆʼ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.