‘ಪೆಪೆ’, ‘ಲೈನ್ಮ್ಯಾನ್’, ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಹೀಗೆ ವಿಷಯಾಧರಿತ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಕಾಜಲ್ ಕುಂದರ್ ಸದ್ಯ ಸಂಚಿತ್ ಮುಖ್ಯಭೂಮಿಕೆಯಲ್ಲಿರುವ ‘ಮ್ಯಾಂಗೋ ಪಚ್ಚ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಜೂನ್ 5ರಂದು ತೆರೆಕಾಣಲಿದ್ದು, ಈ ಹೊಸ್ತಿಲಲ್ಲಿ ತಮ್ಮ ಸಿನಿಪಯಣ, ನಿರೀಕ್ಷೆಗಳ ಬಗ್ಗೆ ಕಾಜಲ್ ಮಾತನಾಡಿದ್ದಾರೆ.

‘ನಾನು ಮಂಗಳೂರಿನವಳು. ಹುಟ್ಟಿ ಬೆಳೆದದ್ದು ಮುಂಬೈನಲ್ಲಿ’ ಎಂದು ಮಾತು ಆರಂಭಿಸಿದ ಕಾಜಲ್, ‘ಮುಂಬೈನಿಂದ ಇಲ್ಲಿಗೆ ಬಂದು ಬಣ್ಣದ ಲೋಕದ ಪಯಣ ಆರಂಭಿಸಿದಾಗ ಹಲವು ಸವಾಲುಗಳು ಇದ್ದವು. ಆರಂಭದಲ್ಲಿ ಭಾಷೆಯೇ ದೊಡ್ಡ ಸವಾಲಾಯಿತು. ಪರೀಕ್ಷೆಗೆ ತಯಾರಾದಂತೆ ಸಂಭಾಷಣೆಗಳನ್ನು ಬಾಯಿಪಾಠ ಮಾಡುತ್ತಿದ್ದೆ. ನಂತರದಲ್ಲಿ ನನ್ನ ಸ್ನೇಹಿತರ ಜೊತೆ ಕನ್ನಡದಲ್ಲೇ ಮಾತನಾಡುತ್ತಾ ಭಾಷೆ ಸ್ಪಷ್ಟವಾಯಿತು. ಇದೀಗ ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ ಅಲ್ಲಿನ ಸಂಸ್ಕೃತಿಯೂ ಬದಲಾಗುತ್ತದೆ. ಇಲ್ಲಿನ ವರಮಹಾಲಕ್ಷ್ಮಿ ಪೂಜೆಯು ಮುಂಬೈನಲ್ಲಿ ಇರಲಿಲ್ಲ. ಈ ಹಬ್ಬ ನಮ್ಮ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಹಬ್ಬ. ಈಗ ಪ್ರತಿ ವರ್ಷ ಈ ಹಬ್ಬಕ್ಕೆ ಎದುರು ನೋಡುತ್ತಿರುತ್ತೇನೆ’ ಎನ್ನುತ್ತಾರೆ ಅವರು.

‘ರಂಗ ಕಲಾವಿದೆಯಾಗಿದ್ದ ನಾನು ನೃತ್ಯವನ್ನು ಅಭ್ಯಾಸ ಮಾಡಿದ್ದೇನೆ. ‘ಹರಹರ ಮಹಾದೇವ್’ ಧಾರಾವಾಹಿ ಮೂಲಕ ಕಿರುತೆರೆಯ ಪಯಣ ಆರಂಭಿಸಿ ಸಣ್ಣಪುಟ್ಟ ಪಾತ್ರಗಳ ಮೂಲಕ ಬೆಳ್ಳಿತೆರೆಗೆ ಬಂದೆ. ನಾಯಕಿಯಾಗಿ ‘ಮಾಯಾ ಕನ್ನಡಿ’ ಮೊದಲ ಸಿನಿಮಾ. ಬಂದಂತಹ ಅವಕಾಶಗಳಲ್ಲಿ ಕಥೆಗಳನ್ನು ಸೂಕ್ಷ್ಮವಾಗಿ ಕೇಳುತ್ತಿದ್ದೆ. ಆ ಕಥೆಗೆ ನನ್ನ ಪಾತ್ರವು ಬೀರುತ್ತಿದ್ದ ಪ್ರಭಾವವೇನು ಎನ್ನುವುದನ್ನು ಗಮನಿಸುತ್ತಿದ್ದೆ. ಕಥೆ ಹಾಗೂ ಪಾತ್ರವು ನನ್ನನ್ನು ಸೆಳೆದರಷ್ಟೇ ಸಿನಿಮಾವನ್ನು ಆಯ್ಕೆ ಮಾಡುವ ಪರಿಪಾಟ ನನ್ನದು. ಸಿನಿಮಾದೊಳಗೆ ಹೆಸರಿಗೋಸ್ಕರವಷ್ಟೇ ಪಾತ್ರಗಳು ಇದ್ದರೆ ಒಪ್ಪುವುದಿಲ್ಲ. ಹಲವು ಕಥೆಗಳನ್ನು ಈ ಕಾರಣದಿಂದಾಗಿಯೇ ತಿರಸ್ಕರಿಸಿದ್ದೇನೆ. ಪಾತ್ರಗಳ ಮೇಲೆ ಮಾಡುವ ಪ್ರಯೋಗಗಳು ನನ್ನನ್ನು ಸೆಳೆಯುತ್ತವೆ. ಅಂತಹ ಪಾತ್ರದ ಬರವಣಿಗೆ ಆಳವಾಗಿರಬೇಕು. ಗಟ್ಟಿಯಾದ ಕಥೆಗಳು ಸಿಕ್ಕರೆ ಕಣ್ಮುಚ್ಚಿ ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ ಕಾಜಲ್.

‘ಪ್ರತಿಯೊಂದು ಸಿನಿಮಾದಲ್ಲಿ ನಾನು ನಟಿಯಾಗಿ ಪಳಗುತ್ತಾ ಬಂದಿದ್ದೇನೆ. ಮಾಡಿದ ಪ್ರತಿಯೊಂದು ಪಾತ್ರಗಳೂ ಭಿನ್ನವಾಗಿತ್ತು. ಹೀಗಾಗಿ ನನ್ನ ಸಿನಿಮಾ ಜಾನರ್ಗಳೂ ವಿಧವಿಧವಾಗಿ ಕಾಣುತ್ತವೆ. ಕನ್ನಡ ಚಿತ್ರರಂಗಕ್ಕೆ ‘ಕಾಜಲ್ ಕುಂದರ್’ ಎಂಬ ಹೆಸರಿನ ಪರಿಚಯ ಆಗಿದೆ. ‘ಈಕೆ ಭಿನ್ನವಾದ ಪಾತ್ರಗಳನ್ನು ನಿಭಾಯಿಸಬಲ್ಲಳು’ ಎನ್ನುವ ಮಾತುಗಳನ್ನೂ ಕೇಳಿದ್ದೇನೆ. ಆದರೆ ಜನರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ, ಸಿನಿಮಾಗಳು ಇನ್ನೂ ಸಿಕ್ಕಿಲ್ಲ. ನಾನು ಮಾಡಿದ ಒಂದು ಸಿನಿಮಾ ಜನರಿಗೆ ತಲುಪಿ ಅವರು ನನ್ನನ್ನು ಗುರುತಿಸುವಂತಾಗಬೇಕು ಎನ್ನುವ ನಿರೀಕ್ಷೆ, ಆಸೆ ಇದೆ. ಒಂದು ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆದಾಗ ಇದು ಸಾಧ್ಯವಾಗಲಿದೆ. ‘ಮ್ಯಾಂಗೋ ಪಚ್ಚ’ದಲ್ಲಿ ನಾನು ‘ಸುಜಿ’ ಎಂಬ ಪಾತ್ರ ಮಾಡಿದ್ದು, ಈ ಸಿನಿಮಾ ನನ್ನ ನಿರೀಕ್ಷೆಯನ್ನು ಪೂರ್ಣಗೊಳಿಸಲಿದೆ ಎನ್ನುವ ಭರವಸೆ ಇದೆ’ ಎಂದರು.

‘ಗ್ಲಾಮರ್–ಡಿಗ್ಲಾಮರ್ನಲ್ಲಿ ಆಯ್ಕೆ ಎಂದೇನಿಲ್ಲ. ಪಾತ್ರ ಏನು ಬಯಸುತ್ತದೋ ಹಾಗೆ ನಾನು ಸಿದ್ಧಳಾಗುತ್ತೇನೆ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಿಂದಲೂ ಆಫರ್ಗಳು ಬಂದಿವೆ. ಆದರೆ ಯಾವುದೂ ಆಕರ್ಷಿಸಲಿಲ್ಲ. ಆಫರ್ಗಳು ಬಂದಿವೆ ಎಂದ ಮಾತ್ರಕ್ಕೆ ಅಲ್ಲಿಗೆ ಹೋಗಲ್ಲ. ಒಳ್ಳೆಯ ಪಾತ್ರಗಳು ಸಿಕ್ಕರಷ್ಟೇ ಅತ್ತ ಹೆಜ್ಜೆಗಳನ್ನು ಇಡುತ್ತೇನೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು ಕಾಜಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.