ಶನಿವಾರ, ಜುಲೈ 31, 2021
23 °C

ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಹಾಲಿವುಡ್ ನಟಿ ನಯ ರಿವೇರಾ ಮೃತದೇಹ ಪತ್ತೆ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

naya rivera

ಲಾಸ್ ಏಂಜಲೀಸ್: ಕಳೆದ ವಾರ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಹಾಲಿವುಡ್‌ನ ಖ್ಯಾತ ನಟಿ ನಯ ರಿವೇರಾ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ರಿವೇರಾ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆ ಅಲ್ಲ ಎಂಬುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ವೆಂಚುರಾ ಕಂಟ್ರಿ ಶೆರಿಫ್ ಬಿಲ್ ಅಯುಬ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ತೆಯಾಗಿರುವ ಮೃತದೇಹದ ಬಟ್ಟೆ ಮತ್ತು ಸ್ಥಿತಿ ನೋಡಿದರೆ ಅದು ನಯ ರಿವೇರಾ ಅವರದ್ದೇ ಎಂದು ತಿಳಿಯುತ್ತದೆ ಎಂದಿದ್ದಾರೆ ಅಯುಬ್. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

33ರ ಹರೆಯದ ರಿವೇರಾ ಲಾಸ್‌ ಏಂಜಲೀಸ್ ಸುತ್ತಾಡುವುದಕ್ಕಾಗಿ ಬೋಟ್‌ ಒಂದನ್ನು ಒಂದು ಗಂಟೆಗಳ ಅವಧಿಗೆ ಬಾಡಿಗೆಗೆ ಪಡೆದುಕೊಂಡಿದ್ದರು. ಆಕೆಯ ಜತೆ ಕಿರಿಯ ಮಗನೂ ಬೋಟ್‌ನಲ್ಲಿದ್ದನು. ಬುಧವಾರ ಮಧ್ಯಾಹ್ನ  ರಿವೇರಾ ಅವರ ಬೋಟ್ ನಾಪತ್ತೆಯಾಗಿತ್ತು. ರಕ್ಷಣಾ ಬೋಟ್‌ಗಳ ಸಹಾಯದಿಂದ ಹುಡುಕಾಟ ನಡೆಸಿದಾಗ ಮುಳುಗಿರುವ ಬೋಟ್ ಮತ್ತು ಆಕೆಯ ಮಗ ಪತ್ತೆಯಾಗಿದ್ದರು.

ಬೋಟ್ ಮುಳುಗಿದಾಗ ಅಮ್ಮ ನನ್ನನ್ನು ರಕ್ಷಿಸಿ ಬೋಟ್ ಮೇಲೆ ಹತ್ತಿಸಿದರು. ನಾನು ಹಿಂತಿರುಗಿ ನೋಡಿದಾಗ ಅವರು ಮುಳುಗುತ್ತಿರುವುದು ಕಾಣಿಸಿತು ಎಂದು ರಿವೇರಾ ಮಗ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ.

ಕಣಿವೆಯಲ್ಲಿ ನೀರಿನ ಪ್ರವಾಹವೂ ತೀವ್ರವಾಗಿದ್ದರಿಂದ ಬೋಟ್ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ. ಬೋಟ್ ನಿಯಂತ್ರಣ ಕಳೆದುಕೊಳ್ಳುವ  ಹೊತ್ತಲ್ಲಿ ಆಕೆ ಮಗನನ್ನು ಕಾಪಾಡಿದ್ದಾಳೆ. ಆದರೆ ಸ್ವಯಂ ರಕ್ಷಣೆ ಸಾಧ್ಯವಾಗಿಲ್ಲ ಎಂದು ಅಯುಬ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು