ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 18 ಜುಲೈ 2019, 19:30 IST
ಅಕ್ಷರ ಗಾತ್ರ

ಆದಿಲಕ್ಷ್ಮಿ ಪುರಾಣ

ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿರುವ, ರಾಧಿಕಾ ಪಂಡಿತ್ ಅಭಿಯನದ ಚಿತ್ರ ಇದು. ಪ್ರಿಯ ವಿ. ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನೂಪ್ ಭಂಡಾರಿ ಸಂಗೀತ ನೀಡಿದ್ದಾರೆ. ಹಾಡುಗಳನ್ನು ಅನೂಪ್ ಅವರೇ ಬರೆದಿದ್ದಾರೆ. ಪ್ರೀತ ಜಯರಾಮನ್ ಛಾಯಾಗ್ರಹಣ ಚಿತ್ರಕ್ಕಿದೆ. ನಿರೂಪ್ ಭಂಡಾರಿ, ತಾರಾ, ಸುಚೇಂದ್ರ ಪ್ರಸಾದ್, ಯಶ್ವಂತ್ ಶೆಟ್ಟಿ, ಭರತ್ ಕಲ್ಯಾಣ್, ಸೌಮ್ಯಾ ಜಗನ್‍ಮೂರ್ತಿ, ಜೋಯ್ ಸಿಮಾನ್, ವಿಶಾಲ್ ನಾಯರ್, ಕೃಷ್ಣ ನಾಡಿಗ್, ದೀಪಕ್ ಶೆಟ್ಟಿ, ನಾವರ್ ಶಾ, ಮಧು ಹೆಗಡೆ ತಾರಾಗಣದಲ್ಲಿ ಇದ್ದಾರೆ.

ಸಿಂಗ

ಉದಯ್ ಕೆ. ಮೆಹ್ತಾ ನಿರ್ಮಾಣದ, ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ ಕಿರಣ್ ಹಂಪಾಪುರ ಅವರದ್ದು. ಧರ್ಮ ವಿಶ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ರವಿಶಂಕರ್, ತಾರಾ, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಳೆಬಿಲ್ಲು

ನಿಂಗಪ್ಪ ಎಲ್. ನಿರ್ಮಿಸಿರುವ ಮಳೆಬಿಲ್ಲು ಚಿತ್ರ ಪಕ್ಕಾ ಪ್ರೇಮಕಥೆಯನ್ನು ಹೊಂದಿದೆ. ‘ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ, ಅವರ ಬದುಕಿನಲ್ಲಿ ಹುಡುಗಿ ಬಂದಾಗ ಏಳು ಬಣ್ಣಗಳ ಸಮಾಗಮ ಆಗುತ್ತದೆ’ ಎನ್ನುವುದು ಚಿತ್ರದ ಬಗ್ಗೆ ಸಿನಿತಂಡ ನೀಡಿರುವ ವಿವರಣೆ. ನಾಗರಾಜ್ ಹಿರಿಯೂರು ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ. ಸಿ. ನಾರಾಯಣ್ ಛಾಯಾಗ್ರಹಣ, ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಚಿತ್ರಕ್ಕಿದೆ.

ಶರತ್, ಸಂಜನಾ ಆನಂದ್, ನಯನಾ, ಕಿರ್ಲೋಸ್ಕರ್ ಸತ್ಯನಾರಾಯಣ್, ಶ್ರೀನಿವಾಸ ಪ್ರಭು, ಮೈಕೋ ನಾಗರಾಜ್, ಮಹದೇವ್, ಚಂದನ್, ಮೀಸೆ ಆಂಜನಪ್ಪ ತಾರಾಬಳಗದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT