‘ಅಧಿಕ ಪ್ರಸಂಗಿ'ಯ ಆಟ ಶುರು

7

‘ಅಧಿಕ ಪ್ರಸಂಗಿ'ಯ ಆಟ ಶುರು

Published:
Updated:
Deccan Herald

ಸಮಾಜದಲ್ಲಿ ಅಧಿಕ ಪ್ರಸಂಗಿಗಳಿಗೆ ಕೊರತೆಯಿಲ್ಲ. ಸ್ನೇಹಿತರು, ಸಂಬಂಧಿಕರು, ನಮ್ಮ ಮನೆಗಳಲ್ಲೂ ‘ಅಧಿಕ ಪ್ರಸಂಗಿ’ಯೊಬ್ಬ ಇದ್ದೇ ಇರುತ್ತಾನೆ. ಇದೇ ಶೀರ್ಷಿಕೆಯಡಿ ಪ್ರಯೋಗಾತ್ಮಕ ಸಿನಿಮಾವೊಂದು ನಿರ್ಮಾಣವಾಗುತ್ತಿದೆ.

ಅಧಿಕ ಪ್ರಸಂಗಿತನ ತೋರುವವರನ್ನು ಜನರು ವಿಚಿತ್ರವಾಗಿ ನೋಡುತ್ತಾರೆ. ಈ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದು, ‘ಅಧಿಕ ಪ್ರಸಂಗಿ’ ತನ್ನ ಝಲಕ್ ತೋರಿಸಿದ್ದಾನೆ. ಹುಡುಗಿಯೊಬ್ಬಳು ತನ್ನ ಹುಡುಗನಿಗೆ ಸಿಗರೇಟ್ ಹಚ್ಚುವ ಪೋಸ್ಟರ್‌ ಸಖತ್ ಕ್ರೇಜ್ ಹುಟ್ಟಿಸಿದೆ.

ಹಲವು ಚಿತ್ರಗಳಿಗೆ ‌ಸಹ ನಿರ್ದೇಶಕನಾಗಿ, ಎರಡೂ ಚಿತ್ರಕ್ಕೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ರಾಕಿ ಸೋಮ್ಲಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಮೊದಲ ಚಿತ್ರ. ಅವರು ಸಾಕಷ್ಟು ತಯಾರಿ ಮಾಡಿಕೊಂಡೆ ನಿರ್ದೇಶನಕ್ಕೆ ಇಳಿದಿದ್ದಾರೆ. ‘ಸಿನಿಮಾ ಅಂದ್ರೆ ಕೇವಲ ಶೋಕಿ ಅಲ್ಲ. ಪರಿಶ್ರಮಪಟ್ಟರೆ ಈ ಕ್ಷೇತ್ರದಲ್ಲಿಯೂ ಬದುಕು ಕಟ್ಟಿಕೊಳ್ಳಬಹುದು’ ಎನ್ನುವುದು ಅವರ ನಂಬಿಕೆ.

ಸುಕೇತ್ ಈ ಚಿತ್ರದ ನಾಯಕ. ಅವರಿಗೆ ನಟನೆ ಹೊಸತಲ್ಲ. ರಂಗಾಯಣದ ಹಲವು ನಾಟಕಗಳಲ್ಲಿ ಅಭಿನಯಿಸಿರುವ ಅನುಭವ ಅವರಿಗಿದೆ. ‘ಅಧಿಕ ಪ್ರಸಂಗಿ’ಯ ಮೂಲಕ ಸಿನಿಮಾದಲ್ಲಿ ಭವಿಷ್ಯ ಕಂಡುಕೊಳ್ಳುವ ತವಕದಲ್ಲಿದ್ದಾರೆ. ಜಾನ್ವಿ ರೆಡ್ಡಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೂಲತಃ ನೃತ್ಯಗಾತಿಯಾಗಿರುವ ಅವರಿಗೆ ಇದು ಮೊದಲ ಚಿತ್ರ.

ಉಳಿದಂತೆ ರಂಗಾಯಣ ರಘು, ವಿಜಯ್ ಚೆಂಡೂರು ಸಾಥ್ ನೀಡಲಿದ್ದಾರೆ. ನಿರೂಪಕ ಮಂಜುನಾಥ್ ದಾವಣಗೆರೆ ಈ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ಆರ್. ಸಿದ್ದರಾಜು ಬಂಡವಾಳ ಹೂಡಿದ್ದಾರೆ. ಶಿವುಪುತ್ರ ಅವರ ಛಾಯಾಗ್ರಹಣವಿದೆ. ರಾಬರ್ಟ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಸಕಲೇಶಪುರ ಹಾಗೂ ವಿದೇಶದಲ್ಲಿ ಶೂಟಿಂಗ್‌ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !