25ಕ್ಕೆ ‘ಆಡಿಸಿದಾತ’ ಮುಹೂರ್ತ

ಗುರುವಾರ , ಏಪ್ರಿಲ್ 25, 2019
29 °C

25ಕ್ಕೆ ‘ಆಡಿಸಿದಾತ’ ಮುಹೂರ್ತ

Published:
Updated:

ಶ್ರೀಭದ್ರಕಾಳಮ್ಮ, ಶ್ರೀವೀರಭದ್ರೇಶ್ವರಸ್ವಾಮಿ ಪ್ರೊಡಕ್ಷನ್ಸ್ ಲಾಂಛನದಡಿ ಬಿ.ಎಂ. ಚೇತನ್‌ ನಿರ್ಮಿಸುತ್ತಿರುವ ‘ಆಡಿಸಿದಾತ’ ಚಿತ್ರದ ಮುಹೂರ್ತ ಸಮಾರಂಭ ಇದೇ 25ರಂದು ನಡೆಯಲಿದೆ. ನಟ ರಾಘವೇಂದ್ರ ರಾಜ್‌ಕುಮಾರ್ ಈ ಚಿತ್ರದ ನಾಯಕ. ಇದು ಅವರ ನಟನೆಯ 25ನೇ ಚಿತ್ರವೂ ಹೌದು.

ಥ್ರಿಲ್ಲರ್‌ ಕಥೆ ಆಧರಿಸಿರುವ ಇದನ್ನು ಹರೀಶ್ ಭಾರದ್ವಾಜ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ಮೂವತ್ತು ದಿನಗಳ ಕಾಲ ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಉದಯ್ ಬಲ್ಲಾಳ್ ಅವರ ಛಾಯಾಗ್ರಹಣವಿದೆ. ಹರೀಶ್ ಸಂಕಲನ, ಸುನೀಲ್ ರಾಡಿಗರ್(ಬಾಲಿವುಡ್) ಅವರ ಸಾಹಸ ನಿರ್ದೇಶನವಿದೆ. ಹರಿಕೃಷ್ಣ ನೃತ್ಯ ನಿರ್ದೇಶಿಸಿದ್ದಾರೆ.
ವಿ. ನಾಗೇಂದ್ರಪ್ರಸಾದ್, ಫಣೀಶ್ ಭಾರದ್ವಾಜ್ ಸಾಹಿತ್ಯ ರಚಿಸಿದ್ದು, ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !