ಸೋಮವಾರ, ಜನವರಿ 25, 2021
26 °C

‘ಡಿ’ ಥ್ರಿಲ್ಲರ್ ಸಿನಿಮಾದ ಮೂಲಕ ತೆರೆ ಒಂದಾಗಲಿದ್ದಾರೆ ಆದಿತ್ಯ ಹಾಗೂ ಆದಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಡೆಡ್ಲಿ ಸೋಮ’ ಸಿನಿಮಾ ಖ್ಯಾತಿಯ ನಟ ಆದಿತ್ಯ ಹಾಗೂ ಅದಿತಿ ಪ್ರಭುದೇವ ‘ಡಿ’ ಸಿನಿಮಾದ ಮೂಲಕ ತೆರೆ ಮೇಲೆ ಒಂದಾಗಲಿದ್ದಾರೆ. ಈ ಥ್ರಿಲ್ಲರ್ ಸಿನಿಮಾಕ್ಕೆ ಎಸ್‌. ನಾರಾಯಣ್ ನಿರ್ದೇಶನವಿದೆ. ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಹೊಸ ವರ್ಷದ ದಿನದಂದು ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ. ‌

‘ನನ್ನ ಈ ಹೊಸ ವರ್ಷ ಈ ರೀತಿ ಆರಂಭವಾಗುತ್ತದೆ ಎಂಬುದನ್ನು ನಾನು ಕಲ್ಪನೆಯೂ ಮಾಡಿರಲಿಲ್ಲ. ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ’ ಎಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಆದಿತ್ಯ.

‘ಇದೊಂದು ಸೇಡಿನ ಅಂಶ ಇರುವ ಥ್ರಿಲ್ಲರ್ ಚಿತ್ರ. ಎಸ್‌. ನಾರಾಯಣ್ ಅವರ ಪ್ರತೀ ಚಿತ್ರದಂತೆ ಇದರಲ್ಲೂ ಕೌಟುಂಬಿಕ ಮನರಂಜನೆ ಇದೆ. ನಮ್ಮೆಲ್ಲರ ವೃತ್ತಿ ಬದುಕಿಗೆ ಇದೊಂದು ಭಿನ್ನ ಚಿತ್ರ ಹಾಗೂ ಪಾತ್ರವಾಗಲಿದೆ. ನಮ್ಮೆಲ್ಲರಿಗೂ ಚಿತ್ರದ ಬಗ್ಗೆ ಕೌತುಕ ಹೆಚ್ಚಿದೆ. ಇದರಲ್ಲಿ ಅನೇಕ ಆ್ಯಕ್ಷನ್ ದೃಶ್ಯಗಳೂ ಇವೆ. ನಾನು ಈಗಾಗಲೇ ಅದಿತಿ ಜೊತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ, ಅವರು ಉತ್ತಮ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರೊಂದಿಗೆ ಕೆಲಸ ಮಾಡುವುದು ಖುಷಿ ಇದೆ’ ಎಂದಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು