‘ಚಿತ್ರರಂಗದಲ್ಲಿ ನನ್ನ ಆರಂಭದ ದಿನಗಳು ಸುಲಭವಾಗಿರಲಿಲ್ಲ. ನಾನು ಬರೆದ ಸ್ಕ್ರಿಪ್ಟ್ಗಳನ್ನು ಬೇರೆಯವರು ಕದ್ದು ಸಿನಿಮಾ ಮಾಡಿ ₹100 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡಿದ್ದಾರೆ‘ ಎಂದು ‘ಧುರಂಧರ್’ ನಿರ್ದೇಶಕ ಆದಿತ್ಯಧರ್ ಹೇಳಿಕೊಂಡಿದ್ದಾರೆ.
.ಲವ್ ಮಾಕ್ಟೇಲ್ –3 ವಿವಾದ ಬಗೆಹರಿಸಿದ ಕೆಎಫ್ಸಿಸಿ ಅಧ್ಯಕ್ಷೆ ಜಯಮಾಲಾ.ಹೊಸ ಸಿನಿಮಾ ಘೋಷಿಸಿದ ಮಾಜಿ ಬಿಗ್ಬಾಸ್ ಸ್ಪರ್ಧಿ, ನಟಿ ಸಂಗೀತಾ ಶೃಂಗೇರಿ.
ಧುರಂಧರ್ ಹಾಗೂ ಧುರಂಧರ್–2 ಸಿನಿಮಾಗಳು ಯಶಸ್ಸು ಗಳಿಸುತ್ತಿದ್ದಂತೆ, ಅವರ ಈ ಹಿಂದಿನ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ‘ನನ್ನ ಆರಂಭದ ಸಿನಿಮಾ ಜರ್ನಿಯಲ್ಲಿ ಸಾಲು ಸಾಲು ಮೋಸ ಅನುಭವಿಸಿದ್ದೇನೆ. ಚಿತ್ರರಂಗದಲ್ಲಿ ಯಾರನ್ನು ನಂಬಬೇಕು ಎಂಬುವುದೇ ದೊಡ್ಡ ಸವಾಲಾಗಿತ್ತು’ ಎಂದಿದ್ದಾರೆ.

‘ನಾನು ಬರೆದ ಸ್ಕ್ರಿಪ್ಟ್ಗಳನ್ನು ಕದ್ದು, ಬೇರೆಯವರು ಅದರಿಂದಲೇ ನೂರಾರು ಕೋಟಿ ಗಳಿಸಿದ್ದಾರೆ. ಆದರೆ, ಆ ಯಶಸ್ಸಿನ ಹಿಂದೆ ಇದ್ದ ನನ್ನ ಶ್ರಮಕ್ಕೆ ಕಿಂಚಿತ್ತೂ ಮನ್ನಣೆ ಸಿಗಲಿಲ್ಲ. ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಲು 10 ರಿಂದ 12 ವರ್ಷಗಳ ಕಾಲ ನಿರಂತರ ಶ್ರಮವಹಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಉರಿ ದಿ ಸರ್ಜಿಕಲ್ ಸ್ಟ್ರೈಕ್’, ‘ಧುರಂಧರ್’ ಹಾಗೂ ‘ಧುರಂಧರ್: ದಿ ರಿವೆಂಜ್’ ಚಿತ್ರವನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದ್ದಾರೆ.

‘ಧುರಂಧರ್2’ ಚಿತ್ರವು ₹1000ಕೋಟಿಗೂ ಅಧಿಕ ಗಳಿಕೆ ಕಂಡು, ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.