ಭಾನುವಾರ, ಸೆಪ್ಟೆಂಬರ್ 15, 2019
30 °C

ಪ್ರಿಯಾಂಕಾ ಕೈ ಖಾಲಿ!

Published:
Updated:
Prajavani

ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ, ಪತಿ ನಿಕ್‌ ಜೋನಸ್‌ ಜೊತೆ ವಿದೇಶ ಪ್ರವಾಸ, ಪಾರ್ಟಿ ಎಂದು ಸುತ್ತಾಡುತ್ತಾ ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ ವೃತ್ತಿ ಜೀವನದ ವಿಷಯ ತೆಗೆದುಕೊಂಡರೆ, ಪ್ರಿಯಾಂಕಾ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ, ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಮಾತುಗಳು ಬಿ– ಟೌನ್‌ನಲ್ಲಿ ಕೇಳಿಬರುತ್ತಿವೆ. 

ಪ್ರಿಯಾಂಕಾ ಸದ್ಯ ಬಾಲಿವುಡ್‌ನ ‘ದ ಸ್ಕೈ ಈಸ್‌ ಪಿಂಕ್‌’ ಸಿನಿಮಾದಲ್ಲಿ ಫರ್ಹಾನ್‌ ಅಖ್ತರ್‌ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಹೊರತುಪಡಿಸಿದರೆ ಅವರು ಯಾವುದೇ ಸಿನಿಮಾಕ್ಕೂ ಸಹಿ ಮಾಡಿಲ್ಲ. ಹಾಗೇ ಹಾಲಿವುಡ್‌ನಿಂದಲೂ ಅವರಿಗೆ ಯಾವುದೇ ಅವಕಾಶಗಳು ಬಂದಿಲ್ಲ. 

ಬಾಲಿವುಡ್‌ನಲ್ಲಿ ಈಗ ಕೆಲ ಖ್ಯಾತ ನಟಿಯರು ಪ್ರಯೋಗಾತ್ಮಕ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ನಾಯಕಿ ಪಾತ್ರಕ್ಕೆ ಅಷ್ಟೇ ಸೀಮಿತವಾಗಿಲ್ಲ. ಅದರಲ್ಲಿ ಪ್ರಿಯಾಂಕಾ ಕೂಡ ಒಬ್ಬರು. ಅವರು ‘ದ ಸ್ಕೈ ಈಸ್‌ ಪಿಂಕ್‌’ ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ತಾಯಿಯ ಪಾತ್ರ ನಿರ್ವಹಿಸಲು ಹಿಂದಿ ನಟಿಯರು ಹಿಂಜರಿಯುತ್ತಾರೆ. ಆದರೆ ಪ್ರಿಯಾಂಕಾ ಸಿನಿಮಾ ಕತೆ, ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಅವರು ಈ ವಿಚಾರದಲ್ಲಿ ವಿಭಿನ್ನ ಅವರ ಪಾತ್ರಗಳ ಆಯ್ಕೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಿಯಾಂಕಾ ಬಾಲಿವುಡ್‌ನಲ್ಲಿ ಹೆಚ್ಚು ಹೆಚ್ಚು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಲಿ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. 

Post Comments (+)