ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಜೆ ಆಗಲಿದ್ದಾರೆ 'ಓಲ್ಡ್‌ ಮಾಂಕ್‌' ಶ್ರೀನಿ

Last Updated 19 ಡಿಸೆಂಬರ್ 2021, 10:57 IST
ಅಕ್ಷರ ಗಾತ್ರ

‘ಬೀರ್‌ಬಲ್‌’ ಚಿತ್ರದ ಯಶಸ್ಸಿನ ನಂತರ ‘ಓಲ್ಡ್‌ ಮಾಂಕ್‌’ ಸಿದ್ಧಪಡಿಸಿರುವ ನಟ, ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಈಗ ಹೊಸದೊಂದು ಯೋಜನೆಗೆ ಕೈ ಹಾಕಿದ್ದಾರೆ.

ಇನ್ನೂ ಹೆಸರಿಡದ ಚಿತ್ರವೊಂದು ಈಗಾಗಲೇ ಹೈದರಾಬಾದ್‌ನಲ್ಲಿ ಸೆಟ್ಟೇರಿದೆ ಎಂದು ಶ್ರೀನಿ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಶ್ರೀನಿ ಅವರದ್ದು ರೇಡಿಯೋ ಜಾಕಿ ಪಾತ್ರವಂತೆ. ನಟನೆಗೆ ಬರುವ ಮೊದಲು ಶ್ರೀನಿ ಅವರು ರೇಡಿಯೋ ಜಾಕಿ ಆಗಿದ್ದರು. ಆ ಅನುಭವವನ್ನೇ ಬಳಸಿಕೊಂಡು ಈ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡ ಆವೃತ್ತಿಯಲ್ಲಿ ಶ್ರೀನಿ ನಾಯಕ.

ಈ ಚಿತ್ರದ ಕಥೆ, ನಿರ್ದೇಶನ ಪ್ರಶಾಂತ್‌ ಸಾಗರ್‌ ಅಟ್ಲೂರಿ ಅವರದ್ದು. ರಘುವೀರ್‌ ಗೋರಿಪಾರ್ತಿ ಮತ್ತು ಸೃಜನ್‌ ಯರಬೋಳು ನಿರ್ಮಾಪಕರು. ಸುಮಾ ಕಾರ್ತಿಕೇಯ ಅವರೂ ಚಿತ್ರಕಥೆಗೆ ಕೈಜೋಡಿಸಿದ್ದಾರೆ. ಶ್ರೀರಾಮ್‌ ಮದ್ದೂರಿ ಅವರ ಸಂಗೀತವಿದೆ.

ಓಲ್ಡ್‌ ಮಾಂಕ್‌ ಮುಂದಿನ ವರ್ಷ ಫೆಬ್ರುವರಿಯಲ್ಲಿ ಬಿಡುಗಡೆಗೊಳ್ಳಲಿದೆ. ಹೊಸ ಚಿತ್ರದ ಶೂಟಿಂಗ್‌ ಈಗಾಗಲೇ ಹೈದರಾಬಾದ್‌ನಲ್ಲಿ ಆರಂಭವಾಗಿದೆ. 35 ದಿನಗಳ ವೇಳಾಪಟ್ಟಿ ಹಾಕಿಕೊಳ್ಳಲಾಗಿದೆ. ಈಗಾಗಲೇ 12 ದಿನಗಳ ಶೂಟಿಂಗ್‌ ಮುಕ್ತಾಯವಾಗಿದೆ ಎಂದು ಶ್ರೀನಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT