ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಗರ್‌–3: ಸಲ್ಮಾನ್‌ ಖಾನ್‌ ಜೊತೆ ಶೂಟಿಂಗ್‌ಗೆ ಮರಳಲಿರುವ ಕತ್ರಿನಾ ಕೈಪ್‌

Last Updated 18 ಡಿಸೆಂಬರ್ 2021, 10:29 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಕೂಡ ಶೀಘ್ರವೇ ಸಿನಿಮಾ ಶೂಟಿಂಗ್‌ಗೆ ಮರಳಲಿದ್ದಾರೆ ಎಂದು ಟೈಗರ್‌–3 ಸಿನಿಮಾದ ಚಿತ್ರದ ತಂಡ ಹೇಳಿದೆ.

ಟೈಗರ್‌–3 ಸಿನಿಮಾದ ಕೊನೆಯ ಹಂತದ ಶೂಟಿಂಗ್‌ ದೆಹಲಿಯಲ್ಲಿ ನಡೆಯಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.

ಜನವರಿ ಮೊದಲ ಮತ್ತು ಎರಡನೇ ವಾರದಲ್ಲಿ ಚಿತ್ರೀಕರಣ ನಡೆಯಲಿದೆ. ಇದರಲ್ಲಿ ಸಲ್ಮಾನ್‌ ಖಾನ್‌, ಹಾಗೂ ಕತ್ರಿನಾ ಕೈಫ್‌ ಭಾಗವಹಿಸಲಿದ್ದಾರೆ. ವಿಕ್ಕಿ ಕೌಶಲ್‌ ಅವರನ್ನು ಮದುವೆಯಾಗಿರುವ ಕತ್ರಿನಾ ಕೂಡ ಸಲ್ಮಾನ್‌ ಖಾನ್‌ ಜೊತೆ ಶೂಟಿಂಗ್‌ ಮಾಡಲಿದ್ದಾರೆ. ದೆಹಲಿಯಲ್ಲಿ 20 ದಿನಗಳಿಗೂ ಹೆಚ್ಚು ಕಾಲ ಅಲ್ಲಿ ಇರಲಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹವು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ಡಿಸೆಂಬರ್ 9 ರಂದು ನೆರವೇರಿತ್ತು.

ಈಗಾಗಲೇ ವಿಕ್ಕಿ ಕೌಶಲ್‌ ಅವರು ಕೆಲಸಕ್ಕೆ ಮರಳಿದ್ದು, ಬಾಕಿ ಇರುವ ತಮ್ಮ ಸಿನಿಮಾ ಕೆಲಸಗಳನ್ನು ಮುಗಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT