ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಶ್ವರ್ಯಾ ಗರ್ಭಿಣಿಯೇ?

Last Updated 28 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಇಂಥ ಒಂದು ಸುದ್ದಿ ಕಳೆದ ವಾರ ಬಾಲಿವುಡ್‌ ಅಂಗಳದಲ್ಲಿ ಹರಿದಾಡಿತ್ತು.

ಗೋವಾದ ಬೀಚ್‌ನಲ್ಲಿ ಪತಿ ಅಭಿಷೇಕ್‌ ಬಚ್ಚನ್‌ ಜೊತೆ ವಾಯು ವಿಹಾರ ಮಾಡುತ್ತಿದ್ದಾಗ ತೆಗೆದಿದ್ದ ಚಿತ್ರವೊಂದು ಈ ಸುದ್ದಿ ಹುಟ್ಟಿಕೊಳ್ಳಲು ಕಾರಣವಾಗಿತ್ತು ಎಂಬುದು ಕುತೂಹಲದ ಅಂಶ. ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಐಶ್ವರ್ಯಾ ಫ್ಯಾನ್‌ಗಳು ‘ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಅವರು ಪುನಃ ಗರ್ಭಿಣಿಯಾಗಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ...’ ಎಂದೆಲ್ಲ ಮನಸ್ಸಿಗೆ ತೋಚಿದಂತೆ ಸುದ್ದಿಯನ್ನು ಹಬ್ಬಿಸಿದರು.

ಈ ಸುದ್ದಿ ಐಶ್‌ ಅವರ ವಕ್ತಾರನ ಕಿವಿಗೆ– ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ಅವರು ಕೂಡಲೇ ಈ ವದಂತಿಗಳಿಗೆ ತೆರೆ ಎಳೆದರು. ‘ಅಂಥದ್ದೇನೂ ವಿಶೇಷಗಳಿಲ್ಲ. ಗೋವಾದ ಬೀಚ್‌ನಲ್ಲಿ ಐಶ್ವರ್ಯಾ ಅವರು ಹೋಗುತ್ತಿದ್ದಾಗ ಯಾವುದೋ ಆ್ಯಂಗಲ್‌ನಿಂದ ಚಿತ್ರ ತೆಗೆದಿದ್ದರಿಂದ ಆಕೆ ಗರ್ಭಿಣಿಯಂತೆ ಕಾಣುವಂತಾಯಿತು’ ಎಂದು ಅವರು ಸ್ಪಷ್ಟನೆ ನೀಡಿದ್ದು ಆ ನಂತರ ಸುದ್ದಿಯಾಯಿತು.

ಅಂದಹಾಗೆ ಐಶ್ವರ್ಯಾ ಅವರು ಶೀಘ್ರದಲ್ಲೇ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದಾರಂತೆ. ‘ಆ ಬಗ್ಗೆ ಇನ್ನಷ್ಟು ಮಾಹಿತಿ ಕೊಡಿ’ ಎಂದರೆ, ‘ನನ್ನ ಸಿನಿಮಾಗಳ ಬಗ್ಗೆ ನಾನೇ ಹೇಳಿಕೊಂಡು ತಿರುಗಾಡುವುದು ಸರಿಯಲ್ಲ. ಚಿತ್ರವನ್ನು ಕುರಿತ ಮಾಹಿತಿಯನ್ನು ನನ್ನ ನಿರ್ದೇಶಕರು ಮತ್ತು ನಿರ್ಮಾಪಕರು ಕೊಡುತ್ತಾರೆ. ಇತ್ತೀಚೆಗಷ್ಟೇ ನಾನು ಒಂದು ಒಳ್ಳೆಯ ಸಬ್ಜೆಕ್ಟ್‌ ಇರುವ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಆ ಬಗ್ಗೆಯೂ ನಾನು ಏನನ್ನೂ ಹೇಳಲಾರೆ. ಸಂದರ್ಭ ಬಂದಾಗ ನಿರ್ದೇಶಕರೇ ಎಲ್ಲವನ್ನೂ ತಿಳಿಸುತ್ತಾರೆ’ ಎನ್ನುತ್ತಾರೆ.

ಆದರೆ ಈ ಸಿನಿಮಾದ ಬಗ್ಗೆ ಈಗಾಗಲೇ ಕೆಲವು ವದಂತಿಗಳು ಹರಿದಾಡಲು ಆರಂಭವಾಗಿವೆ. ಚಿತ್ರವನ್ನು ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶಿಸುವರಂತೆ, ಅದು ಕವಿ ಸಾಹಿರ್‌ ಲುಧಿಯಾನವಿ ಅವರ ಜೀವನಚರಿತ್ರೆಯನ್ನು ಆಧರಿಸಿದ ಚಿತ್ರವಂತೆ, ಚಿತ್ರದಲ್ಲಿ ಐಶ್ವರ್ಯಾ ಅವರು ಪತಿ ಅಭಿಷೇಕ್‌ ಜೊತೆ ಕಾಣಿಸಲಿದ್ದಾರಂತೆ... ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಜಾಮುನ್‌ ಸಿಕ್ಕಿಲ್ಲ:ಐಶ್ವರ್ಯಾ ಮತ್ತು ಅಭಿಷೇಕ್‌ ಅವರು ‘ಗುಲಾಬ್‌ ಜಾಮುನ್‌’ ಸಿನಿಮಾದಲ್ಲಿ ಜೊತೆಯಾಗಿ ನಟಿಸಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಸ್ವತಃ ಐಶ್ವರ್ಯಾ ಅವರೇ ಸಂದರ್ಶನವೊಂದರಲ್ಲಿ ಈ ಮಾಹಿತಿ ನೀಡಿದ್ದರು. ಆದರೆ ಜಾಮೂನ್‌ ಅವರಿಗೆ ದಕ್ಕಲಿಲ್ಲ. ಇಬ್ಬರೂ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬುದು ಈಗಿನ ಹೊಸ ಸುದ್ದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT