ಮಾವನ ಮೇಲೆ ಐಶು ಮುನಿಸು!

ಗುರುವಾರ , ಜೂನ್ 27, 2019
29 °C

ಮಾವನ ಮೇಲೆ ಐಶು ಮುನಿಸು!

Published:
Updated:
Prajavani

ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಾವ ಅಮಿತಾಭ್‌ ಬಚ್ಚನ್ ಮೇಲೆ ಮುನಿಸಿಕೊಂಡಿದ್ದಾರಂತೆ. ಯಾಕೆ ಅಂತೀರಾ? ಅಮಿತಾಭ್ ತಮ್ಮ ಹೊಸ ಚಿತ್ರ ‘ಚೆಹರೆ’ಯಲ್ಲಿ ಇಮ್ರಾನ್ ಹಶ್ಮಿ ಜೊತೆ ನಟಿಸುತ್ತಿದ್ದಾರೆ. ಈ ವಿಷಯ ಐಶೂಗೆ ಸ್ವಲ್ಪವೂ ಇಷ್ಟವಿಲ್ಲವಂತೆ. ಇಮ್ರಾನ್ ಹಶ್ಮಿ ಈ ಹಿಂದೆ ಟಾಕ್ ಷೋವೊಂದರಲ್ಲಿ ಐಶು ವಿರುದ್ಧ ಮಾತನಾಡಿದ್ದನ್ನೇ ಮನಸಲ್ಲಿಟ್ಟುಕೊಂಡಿದ್ದು, ಈಗ ಅಮಿತಾಭ್, ಹಶ್ಮಿ ಜೊತೆಗೆ ನಟಿಸುತ್ತಿರುವ ಬಗ್ಗೆ ಐಶು ಮುನಿಸು ತೋರಿಸುತ್ತಿದ್ದಾರಂತೆ.

ಕೆಲ ವರ್ಷಗಳ ಹಿಂದೆ ಇಮ್ರಾನ್, ಐಶು ಜೊತೆಗೆ ನಟಿಸಲು ಇಷ್ಟವಿಲ್ಲವೆಂದು ಮುಕ್ತವಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಕರಣ್ ಜೋಹರ್‌ ಅವರ ‘ಕಾಫಿ ವಿತ್ ಕರಣ್‌’ನಲ್ಲಿ ಐಶ್ವರ್ಯಾ ಕುರಿತು ಅಭಿಪ್ರಾಯ ಕೇಳಿದಾಗ, ಐಶ್ವರ್ಯಾ ಅವರನ್ನು ಪ್ಲಾಸ್ಟಿಕ್‌ಗೆ ಹೋಲಿಸಿ ಮಾತನಾಡಿದ್ದರು. ಹಶ್ಮಿಯ ಈ ಮಾತಿನಿಂದ ಐಶು ತುಂಬಾ ನೊಂದುಕೊಂಡಿದ್ದರು.

ನಂತರದ ದಿನಗಳಲ್ಲಿ ಐಶ್ವರ್ಯಾಗೆ ಸಂದರ್ಶನವೊಂದರಲ್ಲಿ ನಿಮ್ಮ ಬಗ್ಗೆ ಬಂದ ಅತಿ ಕೆಟ್ಟ ಕಾಮೆಂಟ್ ಯಾವುದು ಎಂದು ಸಂದರ್ಶನ ವೊಂದರಲ್ಲಿ ಕೇಳಿದಾಗ ‘ಫೇಕ್ ಮತ್ತು ಪ್ಲಾಸ್ಟಿಕ್’ ಅನ್ನುವ ಕಾಮೆಂಟ್ ತಮಗೆ ಬಂದ ಅತಿ ಕೆಟ್ಟ ಕಾಮೆಂಟ್ ಎಂದು ಹೇಳಿದ್ದರು. ಮತ್ತೆ ಈ ಬಗ್ಗೆ ಹಶ್ಮಿಯನ್ನು ಪ್ರಶ್ನಿಸಿದಾಗ, ಎರಡು ವರ್ಷಗಳ ಹಿಂದೆ ಕರಣ್ ಜೋಹರ್ ಷೋನಲ್ಲಿ ತಾವು ಮಾತನಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಹಶ್ಮಿ, ಅಕಸ್ಮಾತ್ ಐಶ್ವರ್ಯಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಈ ಬಗ್ಗೆ ತಾವು ಕ್ಷಮೆಯಾಚಿಸುವುದಾಗಿ ಹೇಳಿದ್ದರು. 

ಈಗ ಹಶ್ಮಿ ಜೊತೆಯಲ್ಲಿಯೇ ಮಾವ ಅಮಿತಾಭ್ ನಟಿಸುತ್ತಿರುವುದು ಐಶುಗೆ ಕೋಪ ತಂದಿದೆಯಂತೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !