ಸ್ಟಾರ್ ಆಗುವುದು ಕ್ಯಾಟ್‌ವಾಕ್‌ನಂತಲ್ಲ!

7

ಸ್ಟಾರ್ ಆಗುವುದು ಕ್ಯಾಟ್‌ವಾಕ್‌ನಂತಲ್ಲ!

Published:
Updated:
Prajavani

‘ಪ್ರಸಿದ್ಧಿ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುವುದು ಬಹಳ ಸುಲಭ. ಹಾಗಂತ ಈ ಎರಡರಲ್ಲಿ ಯಶಸ್ವಿಯಾದರೆ ಯಶಸ್ವಿ ನಟ/ನಟಿಯಾದಂತೆ ಅಲ್ಲ. ತಾರೆಯಾಗುವುದೆಂದರೆ ಕ್ಯಾಟ್‌ವಾಕ್‌ ಅಲ್ಲ’ – ಇದು ಬಾಲಿವುಡ್‌ನ ಹಿರಿಯ ನಟಿ ಕಾಜೋಲ್‌ ವಿಶ್ಲೇಷಣೆ.

’ರ‍್ಯಾಂಪ್‌ನಲ್ಲಿ ಕ್ಯಾಟ್‌ವಾಕ್‌ ಮಾಡುವುದೆಂದರೆ ಹಾಗೆ ಬಂದು ಹೀಗೆ ಹೋಗುವುದು. ನಟರಾಗುವುದು ಹಾಗಲ್ಲ. ತಾರೆ ಮತ್ತು ಖ್ಯಾತಿಯನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು. ಪ್ರಸಿದ್ಧಿ ಪಡೆದ ಎಷ್ಟೊಂದು ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಆದರೆ ತಾರೆಯರಿರುವುದು ಬೆರಳೆಣಿಕೆಯಲ್ಲಿ‘ ಎಂದು ಕಾಜೋಲ್‌ ಹೇಳಿದರು.

25 ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿರುವ ಈ ನಟಿ, ವೈಯಕ್ತಿಕ ಮತ್ತು ವೃತ್ತಿಪರವಾಗಿ ಕಾಲದೊಂದಿಗೆ ಹೆಜ್ಜೆ ಹಾಕಲು ತೀರ್ಮಾನಿಸಿದ್ದಾಗಿ ಹೇಳಿಕೊಂಡರು. ವಯಸ್ಸಿಗೆ ತಕ್ಕುದಾಗಿ ತಾವು ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಬೆಳೆಯುತ್ತಿರುವುದಾಗಿಯೂ ಅವರು ಹೇಳಿದರು.

‘ನಾನು ದೊಡ್ಡ ತಾರೆಯಲ್ಲ. ನಟಿಯಾಗಬೇಕು ಎಂದು ಬಯಸಿ ಚಿತ್ರರಂಗಕ್ಕೆ ಬಂದವಳಲ್ಲ. ಆದರೆ ಕಾಲದ ಗತಿಯೊಂದಿಗೆ ಸಾಗುತ್ತಿರುವಾಗ ಅದು ನನ್ನನ್ನು ಚಿತ್ರರಂಗದ ಅಂಗಳದಲ್ಲಿ ತಂದು ನಿಲ್ಲಿಸಿತು. ನನ್ನ ಪ್ರತಿ ಕೆಲಸವನ್ನೂ ಒಂದು ಆಟವೆಂಬಂತೆ ನೋಡುತ್ತೇನೆ. ಹಾಗಿರುವಾಗ ಸೋಲು ಗೆಲುವು ಸಹಜ’ ಎಂದು ಕಾಜೋಲ್‌ ವಿಶ್ಲೇಷಿಸಿದರು.

ಮುಂಬೈನಲ್ಲಿ ಸೋಮವಾರ ‘ಪ್ಲಾಸ್ಟಿಕ್‌ ಬನೇಗಾ ಫ್ಯಾಂಟಾಸ್ಟಿಕ್‌’ ಎಂಬ ಅಭಿಯಾನದಲ್ಲಿ ಕಾಜೋಲ್‌ ಮತ್ತು ಪತಿ ಅಜಯ್ ದೇವಗನ್‌ ಪಾಲ್ಗೊಂಡಿದ್ದರು. ಅಜಯ್‌ ದೇವಗನ್‌ ನಿರ್ಮಿಸುತ್ತಿರುವ ‘ತಾನಾಜಿ: ದಿ ಅನ್‌ಸಂಗ್‌ ವಾರಿಯರ್‌’ ಚಿತ್ರದಲ್ಲಿ ಕಾಜೋಲ್‌ ನಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !