ಶನಿವಾರ, ಡಿಸೆಂಬರ್ 14, 2019
25 °C

ರೋಹಿತ್‌–ದೇವಗನ್‌ ಜೋಡಿಯಿಂದ ಮತ್ತೆ ಗೋಲ್‌ಮಾಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಗೋಲ್‌ಮಾಲ್‌’ ಸರಣಿ ಚಿತ್ರಗಳ ಭರ್ಜರಿ ಹಿಟ್‌ನಿಂದ ನಟ ಅಜಯ್‌ ದೇವಗನ್‌ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಜೋಡಿ ಬೀಗುತ್ತಿದೆ. 2006ರಲ್ಲಿ ರೋಹಿತ್‌ ಶೆಟ್ಟಿ ಮೊದಲ ಬಾರಿಗೆ ‘ಗೋಲ್‌ಮಾಲ್‌’ ಚಿತ್ರವನ್ನು ತೆರೆಗೆ ತಂದರು. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿಯೂ ಒಳ್ಳೆಯ ಹಣ ಮಾಡಿತು. ಇದರಿಂದ ಉತ್ತೇಜಿತರಾದ ರೋಹಿತ್‌ ಶೆಟ್ಟಿ 2008ರಲ್ಲಿ ಗೋಲ್‌ಮಾಲ್‌ ರಿಟರ್ನ್ಸ್‌ ಮತ್ತು 2010ರಲ್ಲಿ ಗೋಲ್‌ಮಾಲ್‌ 3 ಚಿತ್ರ ನಿರ್ಮಿಸಿದರು. 

ಭಾರಿ ತಾರಾಗಣ ಹೊಂದಿದ ಈ ಎಲ್ಲ ಚಿತ್ರಗಳು ಪ್ರೇಕ್ಷಕರನ್ನು ಇನ್ನಿಲ್ಲದಂತೆ ಮನರಂಜಿಸುವಲ್ಲಿ ಯಶಸ್ವಿಯಾದವು. ಪ್ರೇಕ್ಷಕರ ನಾಡಿ ಮಿಡಿತ ಅರಿತ ರೋಹಿತ್ ಶೆಟ್ಟಿ 2017ರಲ್ಲಿ ಪುನಃ ‘ಗೋಲ್‌ಮಾಲ್‌ ಅಗೇನ್‌’ ಚಿತ್ರ ಬಿಡುಗಡೆ ಮಾಡಿದ್ದರು.

ಈಗ ಮತ್ತೆ ಅಜಯ್‌–ರೋಹಿತ್‌ ಜೋಡಿ ಮತ್ತೊಂದು ಗೋಲ್‌ಮಾಲ್‌ ಮಾಡಲು ಸಿದ್ಧರಾಗಿದ್ದಾರೆ. ಗೋಲ್‌ಮಾಲ್‌ ಸರಣಿಯ ಐದನೇ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅಜಯ್‌ ದೇವಗನ್‌ ಘೋಷಿಸಿದ್ದಾರೆ.

ಈ ವಿಷಯವನ್ನು ಟ್ವೀಟ್‌ ಮಾಡಿರುವ ಅಜಯ್‌, ರೋಹಿತ್‌ ಜತೆಗಿರುವ ಚಿತ್ರವನ್ನೂ ಟ್ಯಾಗ್‌ ಮಾಡಿದ್ದಾರೆ. ‘ಹಿಂದಿ ಚಿತ್ರರಂಗದಲ್ಲಿ ಐದು ಸರಣಿ ಚಿತ್ರಗಳ ಮೂಲಕ ಗೋಲ್‌ಮಾಲ್‌ ಹೊಸ ಇತಿಹಾಸ ನಿರ್ಮಿಸಿದೆ. ಮತ್ತೊಮ್ಮೆ ನಗೆಯ ಹೊನಲು ಹರಿಸಲು ಬರುತ್ತಿದ್ದೇವೆ. ನಗಲು ಸಿದ್ಧರಾಗಿ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅಜಯ್‌– ಕಾಜೊಲ್‌ ಸಂಸಾರದ ಗುಟ್ಟು

ಹಿಂದಿನ ಗೋಲ್‌ಮಾಲ್‌ ಚಿತ್ರಗಳಲ್ಲಿದ್ದ ದೊಡ್ಡ ತಾರಾ ಬಳಗ ಬಹುತೇಕ ಮುಂದುವರೆಯಲಿದೆ. ಗೋಲ್‌ಮಾಲ್‌–5ರಲ್ಲಿಯೂ ನಗೆಗೆ ಬರವಿರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಅರ್ಷದ್‌ ವಾರ್ಸಿ, ಶರ್ಮಾನ್‌ ಜೋಷಿ, ತುಷಾರ್‌ ಕಪೂರ್‌, ಪರೇಶ್‌ ರಾವಲ್‌, ರಿಮಿ ಸೆನ್‌, ಕುನಾಲ್‌ ಖೇಮು, ಶ್ರೇಯಸ್‌ ತಲಪಾಡೆ, ಪರಿಣೀತಿ ಚೋಪ್ರಾ, ಟಬು, ಜಾನಿ ಲಿವರ್‌ ದೊಡ್ಡ ನಟರ ಹಿಂಡು ಈ ಸರಣಿಯಲ್ಲಿ ಕಾಣಿಸಿಕೊಂಡಿದೆ.

ಪ್ರತಿಕ್ರಿಯಿಸಿ (+)