‘ಭುಜ್‌’ ಶೂಟಿಂಗ್‌ನಲ್ಲಿ ಅಜಯ್‌ ದೇವಗನ್‌

ಭಾನುವಾರ, ಜೂಲೈ 21, 2019
27 °C

‘ಭುಜ್‌’ ಶೂಟಿಂಗ್‌ನಲ್ಲಿ ಅಜಯ್‌ ದೇವಗನ್‌

Published:
Updated:
Prajavani

‘ಭುಜ್‌: ದ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ ಎಂದು ನಟ ಅಜಯ್‌ ದೇವಗನ್ ಹೇಳಿಕೊಂಡಿದ್ದಾರೆ.

ಸ್ಟಾರ್‌ ನಟ, ನಟಿಯರ ದಂಡೇ ಚಿತ್ರದ ತಾರಾಗಣದಲ್ಲಿದೆ. ಅಜಯ್‌ ಜೊತೆಗೆ ಸಂಜಯ್‌ ದತ್‌, ಸೋನಾಕ್ಷಿ ಸಿನ್ಹಾ, ರಾನಾ ದಗ್ಗುಬಾಟಿ, ಪರಿಣಿತಿ ಚೋಪ್ರಾ, ಆ್ಯಮಿ ವಿರ್ಕ್‌ ನಟಿಸುತ್ತಿರುವುದು ವಿಶೇಷ. ಹೈದರಾಬಾದ್‌ನಲ್ಲಿ ಸೋನಾಕ್ಷಿ ಈಗಾಗಲೇ ಮೊದಲ ಹಂತದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಜುಲೈ ಅಂತ್ಯದಲ್ಲಿ ಅಜಯ್‌ ಕೂಡ ಶೂಟಿಂಗ್‌ ತಂಡ ಸೇರಿಕೊಳ್ಳಲಿದ್ದಾರೆ.

ರಾಮೋಜಿರಾವ್‌ ಸ್ಟುಡಿಯೋದಲ್ಲಿ ಈ ಸಿನಿಮಾಕ್ಕಾಗಿ ಬೃಹತ್‌ ಸೆಟ್ ಹಾಕಲಾಗಿದೆಯಂತೆ. ಸಂಜಯ್‌ ದತ್‌ ಕೂಡ ಕೆಲವು ಭಾಗದ ಶೂಟಿಂಗ್ ಮುಗಿಸಿದ್ದಾರೆ. ಸಿನಿಮಾದ ಮುಖ್ಯ ಭಾಗ ಸೇರಿದಂತೆ 20 ದಿನದ ಶೂಟಿಂಗ್ ಮಾತ್ರ ಬಾಕಿ ಇದೆ ಎಂದು ಸಿನಿ ತಂಡ ಹೇಳಿಕೊಂಡಿದೆ.

ಗುಜರಾತ್‌ನ ಮಧಾಪುರದ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. 300 ಮಹಿಳೆಯರ ಸಾಧನೆಯ ಹಾದಿಯ ಯಶೋಗಾಥೆ ಇದರಲ್ಲಿದೆ. 1971ರ ಭಾರತ–ಪಾಕ್‌ ಯುದ್ಧ ಗೆಲ್ಲಲು ಕಾರಣವಾದ ಕತೆಯೊಂದರ ಅನಾವರಣ ಚಿತ್ರದ ಪ್ರಮುಖ ಆಕರ್ಷಣೆ. ಅಭಿಷೇಕ್‌ ದುದೈಯಾ ನಿರ್ದೇಶನದ ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ.

Post Comments (+)